ಡೀಸೆಲ್ ಬೆಲೆ ಏರಿಕೆ : ಅನಿರ್ಧಿಷ್ಟಾವಧಿ ಮುಷ್ಕರ ಹೂಡಲಿರುವ ಕೊಳವೆ ಬಾವಿ ತೋಡುವ ಯಂತ್ರಗಳು

Update: 2021-02-11 16:42 GMT

ಪಣಂಬೂರು :  ಡೀಸೆಲ್ ಬೆಲೆ ಏರಿಕೆಯಿಂದ ದ.ಕ ಮತ್ತು ಉಡುಪಿ ಜಿಲ್ಲೆಯ ಸುಮಾರು 80ಕ್ಕೂ ಹೆಚ್ಚು ಕೊಳವೆಬಾವಿ ತೋಡುವ ಯಂತ್ರಗಳು (ರಿಗ್) ಗುರುವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಹೂಡಲಿವೆ. ವಾಹನಗಳನ್ನು ನಿರ್ವಹಣೆ ಮಾಡಲಾಗದ ಸ್ಥಿತಿಯನ್ನು ಮಾಲಕರು ತಲುಪಿದ್ದು ವಾಹನ ನಿಲ್ಲಿಸಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಪ್ರತೀ ಯಂತ್ರದಲ್ಲಿ 30 ಮಂದಿ ಕಾರ್ಮಿಕರು ಬೇಕಾಗಿದೆ. ಉತ್ತರ ಭಾರತದವರೇ ಹೆಚ್ಚಿದ್ದಾರೆ. ಇನ್ನೊಂದೆಡೆ ತೀವ್ರಗತಿಯಲ್ಲಿ ಏರುತ್ತಿರುವ ಇಂಧನ ಬೆಲೆ ನಮ್ಮನ್ನು ಕಂಗಾಲು ಮಾಡಿದೆ. ಇತ್ತ ಕೊಳವೆ, ಬಿಡಿ ಭಾಗಗಳು ದುಬಾರಿಯಾಗಿದೆ. ಕೊಳವೆ ಬಾವಿ ತೋಡಲು ಈಗಿರುವ ದರಕ್ಕಿಂತ ಶೇ40ರಷ್ಟು ಹೆಚ್ಚು ಮಾಡಿದರೆ  ಮಾತ್ರ ಯಂತ್ರ ಮತ್ತೆ ಪುನರಾರಂಭ ಮಾಡಬಹುದು. ನಮ್ಮ ಸಮಸ್ಯೆಗಳಿಗೆ ಜನರು, ರೈತರು ಸ್ಪಂದಿಸುವ ವಿಶ್ವಾಸವಿದೆ ಎಂದು ದ.ಕ ಉಡುಪಿ ಜಿಲ್ಲಾ ರಿಗ್ ಮಾಲಕರ ಸಂಘದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News