×
Ad

ಉಳ್ಳಾಲ: ಉಚಿತ ಯುನಾನಿ ವೈದ್ಯಕೀಯ ಶಿಬಿರ

Update: 2021-02-11 22:36 IST

ಉಳ್ಳಾಲ : ಹಕೀಂ ಅಜ್ಮಲ್ ಖಾನ್ ಜಯಂತಿ ಯನ್ನು ರಾಷ್ಟ್ರೀಯ ಯುನಾನಿ ದಿನಾಚರಣೆ ಯಾಗಿ ಆಚರಿಸಲಾಗುತ್ತದೆ.  ಸರ್ಕಾರ ದ ನಿರ್ದೇಶನ ಪ್ರಕಾರ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ವೈದ್ಯಕೀಯ ಶಿಬಿರ ವನ್ನು ಸರಳ ರೂಪದಲ್ಲಿ ಆಚರಿಸಲಾಗುತ್ತದೆ. ಯುನಾನಿ ಆಯುಷ್ ನಾ ಅವಿಭಾಜ್ಯ ಅಂಗ. ಈ ಕಾರ್ಯಕ್ರಮ ಜನರಿಗಾಗಿ ಇದೆ. ಇದರ ಸದುಪಯೋಗ ಎಲ್ಲರೂ ಪಡೆದು ಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್  ಹೇಳಿದರು.

ಅವರು ಪಿಲಾರ್ ಜಮಾಅತ್ ಇಸ್ಲಾಮಿ ಹಿಂದ್ ಇದರ ಆಶ್ರಯದಲ್ಲಿ ಜಿಲ್ಲಾ ಆಯುಷ್ ಇಲಾಖೆ ಇದರ ಸಹಯೋಗದೊಂದಿಗೆ ಹಕೀಂ ಅಜ್ಮಲ್ ಖಾನ್ ಜಯಂತಿ ಆಚರಣೆ ಹಾಗೂ 5ನೇ ರಾಷ್ಟ್ರೀಯ ಯುನಾನಿ ದಿನಾಚರಣೆ ಅಂಗವಾಗಿ ಪಿಲಾರ್ ವಿಷನ್ ಸೆಂಟರ್ ನಲ್ಲಿ  ನಡೆದ ಉಚಿತ ಯುನಾನಿ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಡಾ. ಸಯ್ಯದ್ ಝಾಹಿದ್ ಹುಸೈನ್, ಡಾ. ಮಹಮ್ಮದ್ ನೂರುಲ್ಲಾ, ಅಬ್ದುಲ್ ಕರೀಂ, ಮುಹಮ್ಮದ್ ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ವೈದ್ಯ ಮುಹಮ್ಮದ್ ನೂರುಲ್ಲಾ ಅವರನ್ನು ಸನ್ಮಾನಿಸಲಾಯಿತು. ಇಸ್ಹಾಕ್ ಹಸನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು. ಝಾಹಿದ್ ಹುಸೈನ್ ವಂದಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News