‌ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ನೇಮಿಸಿದ ಕಾಂಗ್ರೆಸ್

Update: 2021-02-12 06:57 GMT

ನವದೆಹಲಿ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಹುದ್ದೆಗೆ ಪಕ್ಷದ ಹಿರಿಯ ಮಲ್ಲಿಕಾರ್ಜುನ್ ಖರ್ಗೆಯವರನ್ನು ಕಾಂಗ್ರೆಸ್‌ ಪಕ್ಷವು ನೇಮಿಸಿದೆ ಎಂದು timesofindia.com ವರದಿ ಮಾಡಿದೆ. ಸಂಸದ ಗುಲಾಮ್ ನಬಿ ಆದ್ ಅವರ ನಿವೃತ್ತಿಯೊಂದಿಗೆ ಈ ಹುದ್ದೆ ಖಾಲಿಯಾಗಿತ್ತು.

ಮಲ್ಲಿಕಾರ್ಜುನ್ ಖರ್ಗೆ ಅವರು 2014 ರಿಂದ 2019 ರವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿದ್ದ ಗುಲಾಮ್‌ ನಬಿ ಆಝಾದ್‌ ರಿಗೆ ಕಣ್ಣೀರಿನ ವಿದಾಯ ಹೇಳಿದ್ದು, " ಪ್ರತಿಪಕ್ಷದ ನಾಯಕರಾಗಿ ಗುಲಾಮ್ ನಬಿ ಜಿಯವರ ಸ್ಥಾನವನ್ನು ತುಂಬುವುದು ತ್ರಾಸದಾಯಕ. ಅವರಿಗೆ ದೇಶದ ಕುರಿತು ಮತ್ತು ಸದನದ ಕುರಿತಿದ್ದ ಕಾಳಜಿಯನ್ನು ಹೊಂದಿಸಿಕೊಳ್ಳಲು ಕಷ್ಟವಾಗಬಹುದು ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News