×
Ad

ಮಂಗಳೂರು: ಫೆ.14ರಂದು 'ಕೈಲಾಶ್' ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ

Update: 2021-02-12 14:56 IST

*ಭಾರ್ಗವಿ ಬಿಲ್ಡರ್ಸ್ ಹಾಗೂ ನಿರ್ಮಾಣ್ ಹೋಮ್ಸ್ ಸಹಭಾಗಿತ್ವದಲ್ಲಿ ನಿರ್ಮಾಣ

ಮಂಗಳೂರು, ಫೆ.12: ಕೊಟ್ಟಾರದಲ್ಲಿ ಭಾರ್ಗವಿ ಬಿಲ್ಡರ್ಸ್ ಹಾಗೂ ನಿರ್ಮಾಣ್ ಹೋಮ್ಸ್ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳಲಿರುವ ಬಹು ನಿರೀಕ್ಷೆಯ ಕೈಲಾಸ್ ವಸತಿ ಸಮುಚ್ಚಯಕ್ಕೆ ಫೆ.14ರಂದು ಶಿಲಾನ್ಯಾಸ ನೆರವೇರಲಿದೆ ಎಂದು ನಿರ್ಮಾಣ್ ಹೋಮ್ಸ್‌ನ ಪಾಲುದಾರ ಗುರುದತ್ತ್ ಶೆಣೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ನಿರ್ಮಾಣ್ ಹೋಮ್ ಸಂಸ್ಥೆಯು ‘ಎಫರ್ಡೇಬಲ್ ಲಕ್ಷುರಿ’ ಹಾಗೂ ಭಾರ್ಗವಿ ಬಿಲ್ಡರ್ಸ್ ಸಂಸ್ಥೆಯು ‘ಹೈ ಲಿವಿಂಗ್ ಲಕ್ಷುರಿ ಹೋಮ್ಸ್’ ಎಂಬ ಧ್ಯೇಯದೊಂದಿಗೆ ಅತ್ಯಂತ ಸುಸಜ್ಜಿತ ಅಪಾರ್ಟ್‌ಮೆಂಟ್‌ಗಳನ್ನು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ನೀಡಲಿದೆ ಎಂದರು.

ಕಟ್ಟಡದ ತಾರಸಿಯಲ್ಲಿ ಅತ್ಯಂತ ಸುಸಜ್ಜಿತ ಈಜುಕೊಳವನ್ನು ಸಕಲ ಸುರಕ್ಷಾ ವ್ಯವಸ್ಥೆಗಳೊಂದಿಗೆ ನಿರ್ಮಾಣ ಮಾಡಲಾಗುವುದು. ಇದು ಈ ವಸತಿ ಸಂಕೀರ್ಣದ ಪ್ರಮುಖ ಆಕರ್ಷಣೆಯಾಗಿ ಮೂಡಿಬರಲಿದೆ. ಅಪಾರ್ಟ್ ಮೆಂಟ್ 15 ಅಂತಸ್ತುಗಳನ್ನು ಹೊಂದಲಿದ್ದು, 131 ಅಪಾರ್ಟ್‌ಮೆಂಟ್‌ಗಳನ್ನು ವಾಸ್ತು ಪ್ರಕಾರದಲ್ಲಿ ನಿರ್ಮಾಣ ಮಾಡಲಾಗುವುದು. ಪ್ರೀ ಲಾಂಚ್ ಆಫರ್ ಆಗಿ 2 ಬಿಎಚ್‌ಕೆ ಫ್ಲಾಟ್ ಕೇವಲ 50 ಲಕ್ಷ ರೂ.ಗೆ ಎಲ್ಲಾ ರೀತಿಯ ಸೌಕರ್ಯಗಳೊಂದಿಗೆ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಶಿಲಾನ್ಯಾಸ ಸಮಾರಂಭದಂದು ಬೆಳಗ್ಗೆ 6:15ಕ್ಕೆ ಭೂಮಿ ಪೂಜೆ ನಡೆಯಲಿದ್ದು, 9 ಗಂಟೆಗೆ ಬ್ರೋಶರ್ ಅನಾವರಣಗೊಳ್ಳಲಿದೆ. ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ರವೀಂದ್ರ ಪೈ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ದೇರೆಬೈಲ್ ದಕ್ಷಿಣದ ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ಶಶಿಧರ ಹೆಗ್ಡೆ, ದೇರೆಬೈಲ್ ಪೂರ್ವದ ಕಾರ್ಪೊರೇಟರ್ ರಂಜಿನಿ ಎಲ್. ಕೋಟ್ಯಾನ್, ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ, ಕೈಲಾಶ್ ವಸತಿ ಸಮುಚ್ಚಯದ ಬ್ರಾಂಡ್ ಅಂಬಾಸಿಡರ್ ಹಾಗೂ ತುಳು ಚಿತ್ರರಂಗದ ಹಾಸ್ಯ ಕಲಾವಿದ ಅರವಿಂದ ಬೋಳಾರ್ ಭಾಗವಹಿಸಲಿದ್ದಾರೆ ಎಂದು ಭಾರ್ಗವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್‌ನ ಭಾಸ್ಕರ್ ಗಡಿಯಾರ್ ಮಾಹಿತಿ ನೀಡಿದರು.

ಒಂದು ಎಕರೆ 9 ಸೆಂಟ್ಸ್ ಜಾಗದಲ್ಲಿ ನಿರ್ಮಾಣವಾಗುವ ಕೈಲಾಶ್ ವಸತಿ ಸಮುಚ್ಚಯದಲ್ಲಿ ಉನ್ನತ ಜೀವನ ಶೈಲಿಗೆ ಪೂರಕವಾದ ಲಕ್ಷುರಿ ಅಪಾರ್ಟ್‌ಮೆಂಟ್‌ಗಳು 36 ತಿಂಗಳಲ್ಲಿ ನಿರ್ಮಾಣಗೊಂಡು ಡಿಸೆಂಬರ್ 2023ರ ವೇಳೆಗೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಭೂ ಮಾಲಕರು ಹಾಗೂ ಯೋಜನೆಯ ಸಹ ಪ್ರಾಯೋಜಕ ಶ್ರೀವಸ್ತ ಕೊಜಪಾಡಿ ಮಾಹಿತಿ ನೀಡಿದರು.

ಈವರೆಗೆ ಐದು ವಸತಿ ಯೋಜನೆಗಳು ಮತ್ತು ವಾಣಿಜ್ಯ ಯೋಜನೆಯನ್ನು ಕ್ಲಪ್ತ ಸಮಯಕ್ಕೆ ಪೂರ್ಣಗೊಳಿಸಿರುವ ಸಂಸ್ಥೆಯು ಸದ್ಯ ನಾಲ್ಕು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಕೈಲಾಶ್ ಅಪಾರ್ಟ್‌ಮೆಂಟ್‌ನ ಬುಕ್ಕಿಂಗ್ ಗಾಗಿ ಗ್ರಾಹಕರು ನಗರದ ಕಾಪಿಕಾಡ್‌ನ ಸುಪ್ರಭಾತ್ ಬಿಲ್ಡಿಂಗ್‌ನಲ್ಲಿರುವ ಭಾರ್ಗವಿ ಬಿಲ್ಡರ್ಸ್ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ www.nirmaanhomes.comಗೆ ಲಾಗಾನ್ ಮಾಡಬಹುದು ಅಥವಾ 9611730555/7090933900 ಗೆ ಕರೆ ಮಾಡಬಹುದು. 

ಸೌಜನ್ಯಾ ಹೆಗ್ಡೆ ಸುದ್ದಿಗೋಷ್ಠಿಯನ್ನು ನಿರ್ವಹಿಸಿದರು.


ಕೈಲಾಶ್ ವಸತಿ ಸಮುಚ್ಚಯದಲ್ಲಿ 1,105 ಚ. ಅ. ಮತ್ತು 1,200 ಚ. ಅಡಿ ವಿಸ್ತೀರ್ಣದ 2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು, 1,400 ಚ.ಅ. ಮತ್ತು 1,950 ಚದರ ಅಡಿಯ 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು ಹಾಗೂ ವಸತಿ ಸಂಕೀರ್ಣದ 13 ಮತ್ತು 14ನೆ ಮಹಡಿಯಲ್ಲಿ 2,200 ಚದರ ಅಡಿ ಮತ್ತು 2,720 ಚ. ಅಡಿಯ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್‌ಗಳು ಲಭ್ಯವಿದೆ. ಎಂಫಾರ್ ಕನ್‌ಸ್ಟ್ರಕ್ಷನ್ಸ್ ಸಮುಚ್ಚಯದ ಕಂಟ್ರಾಕ್ಟರ್ ಆಗಿದ್ದು, ಮೆಸರ್ಸ್ ನಾಯಕ್ ಪೈ ಆ್ಯಂಡ್ ಅಸೋಸಿಯೇಟ್ಸ್‌ನ ಸುರೇಶ್ ಪೈ ಯೋಜನೆಯ ಆರ್ಕಿಟೆಕ್ಟ್. ಬಾಬು ನಾರಾಯಣ್ ಸ್ಟ್ರಕ್ಚರಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

-ಗುರುದತ್ತ ಶೆಣೈ, ಪಾಲುದಾರರು, ನಿರ್ಮಾಣ್ ಹೋಮ್ಸ್.


ಕೈಲಾಶ್ ವಸತಿ ಸಮುಚ್ಚಯದ ವಿಶೇಷತೆಗಳು

* ಮಿನಿ ಥಿಯೇಟರ್
* ಹವಾನಿಯಂತ್ರಿತ ಜಿಮ್ನೇಶಿಯಂ
* ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ
* ಮಕ್ಕಳ ಆಟದ ತಾಣ
* ಗ್ರಂಥಾಲಯ
* ಯೋಗ ಪೆವಿಲಿಯನ್
* ವಿಶಾಲವಾದ ಡಬಲ್ ಹೈಟ್ ಹೊಂದಿರುವ ವಿಸಿಟರ್ಸ್ ಲಾಬಿ
* ಇಂಟರ್‌ಕಾಮ್ ಮತ್ತು ಆ್ಯಕ್ಸೆಸ್ ಕಂಟ್ರೋಲ್ಡ್ ಲಾಬಿ ಎಂಟ್ರೆನ್ಸ್
* ಸೋಲಾರ್ ಪ್ಯಾನೆಲ್ಸ್
* ರೆಗ್ಯುಲೇಟೆಡ್ ಗ್ಯಾಸ್ ಸಂಪರ್ಕ
* 2 ಸ್ವಯಂ ಚಾಲಿತ ಲಿಫ್ಟ್
* ಕಾರು ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News