ಮಂಗಳೂರು: ನವರತನ್ ಆಭರಣಗಳ ಪ್ರದರ್ಶನ, ಮಾರಾಟಕ್ಕೆ ಚಾಲನೆ
ಮಂಗಳೂರು, ಫೆ.12: ಬೆಂಗಳೂರಿನ ಪ್ರತಿಷ್ಠಿತ ಆಭರಣ ಸಂಸ್ಥೆ ನವರತನ್ ವತಿಯಿಂದ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳವು ನಗರದ ದಿ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಶುಕ್ರವಾರ ಬೆಳಗ್ಗೆ ಚಾಲನೆಗೊಂಡಿತು. ಫೆ.14ರವರೆಗೆ ಪ್ರದರ್ಶನ ಇರಲಿದೆ.
ಆಸರೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನವರತನ್ ಸಂಸ್ಥೆಯಿಂದ ನಗರದಲ್ಲಿ ಆಭರಣ ಪ್ರದರ್ಶನ ಮಾರಾಟ ಆರಂಭಗೊಂಡಿರುವುದು ಸಂತಸದ ವಿಚಾರ. ಬಗೆಬಗೆಯ ವಿನ್ಯಾಸದ ಆಭರಣಗಳಿವೆ. ಇವುಗಳನ್ನು ನೋಡಲು ಎರಡು ಕಣ್ಣು ಸಾಲುವುದಿಲ್ಲ. ಬೆಳ್ಳಿಯ ಆಭರಣಗಳಂತೂ ಎಲ್ಲರ ಮನಸೂರೆಗೊಳ್ಳಲಿವೆ. ಆ್ಯಂಟಿಕ್ ಕಲೆಕ್ಷನ್, ಪ್ಲಾಟಿನಂ, ವಜ್ರ, ಚಿನ್ನದ ಕಲೆಕ್ಷನ್‌ಗಳು ಒಂದಕ್ಕಿಂತ ಮತ್ತೊಂದು ಅದ್ಭುತ ಎಂದರು.
ಹೊಸ ತಲೆಮಾರಿಗೆ ಹೊಂದಿಕೆಯಾಗುವಂತಹ ವಿನ್ಯಾಸದ ಆಭರಣಗಳ ಮಹಾ ಸಂಗ್ರಹವಿದೆ. ಇಲ್ಲಿ ಎಲ್ಲ ವರ್ಗದ ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಆಭರಣಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ನವರತನ್ ಸಂಸ್ಥೆಯ ಮತ್ತೊಂದು ಶಾಖೆಯು ಶೀಘ್ರದಲ್ಲೇ ಮಂಗಳೂರಿನಲ್ಲಿ ಆರಂಭವಾಗುವಂತಾಗಲಿ. ನವರತನ್ ಅವರ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳವು ಇನ್ನು ಮೂರು ದಿನಗಳ ಕಾಲ ಜರುಗಲಿದೆ. ಮಂಗಳೂರಿನ ಜನತೆ ಇಲ್ಲಿಗೆ ಭೇಟಿ ನೀಡಬೇಕು ಎಂದರು.
ನವರತನ್ ಆಭರಣ ಸಂಸ್ಥೆಯ ಪ್ರತಿನಿಧಿ ರಾಜೇಶ್ ರಂಕಾ ಮಾತನಾಡಿ, ಮಂಗಳೂರಿನಲ್ಲಿ ಮೂರು ದಿನಗಳ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಮಂಗಳೂರಿನ ಹಲವು ಗ್ರಾಹಕರು ಬೆಂಗಳೂರಿಗೆ ಬಂದು ಆಭರಣ ಖರೀದಿಸುತ್ತಿದ್ದಾರೆ. ಕರಾವಳಿಯ ಜನತೆಗೆ ಇದೊಂದು ಸುವರ್ಣಾವಕಾಶವಾಗಿದೆ. ಮಂಗಳೂರಲ್ಲಿ ಚಾಲನೆಗೊಂಡಿರುವ ಪ್ರದರ್ಶನಕ್ಕೆ ಜನತೆ ಆಗಮಿಸಿ, ಆಕರ್ಷಕ ಆಭರಣಗಳನ್ನು ಖರೀದಿಸಬಹುದು. ಇಲ್ಲಿ ಉತ್ಕೃಷ್ಟ ಗುಣಮಟ್ಟದ ಆಭರಗಳಿದ್ದು, ಎಲ್ಲ ಬಗೆಯ ವಿನ್ಯಾಸದ ಕಲೆಕ್ಷನ್‌ಗಳಿವೆ ಎಂದರು.
ಶುಕ್ರವಾರ ಆರಂಭಗೊಂಡ ಆಭರಣ ಪ್ರದರ್ಶನ ಮತ್ತು ಮಾರಾಟವು ಫೆ.14ರವರೆಗೆ ಇರಲಿದೆ. ಬೆಳಗ್ಗೆ 10ರಿಂದ ರಾತ್ರಿ 9 ಗಂಟೆವರೆಗೂ ಮಾರಾಟ ಪ್ರಕ್ರಿಯೆ ನಡೆಯಲಿದೆ. ಆ್ಯಂಟಿಕ್ ಕಲೆಕ್ಷನ್, ಪ್ಲಾಟಿನಂ, ವಜ್ರ, ಚಿನ್ನದ ಕಲೆಕ್ಷನ್‌ಗಳು ಮಾರಾಟಕ್ಕೆ ಲಭ್ಯ ಇವೆ.
ಸಮಾರಂಭದಲ್ಲಿ ನವರತನ್ ಸಂಸ್ಥೆಯ ಪ್ರತಿನಿಧಿಗಳಾದ ಮದನ್, ನರೇಶ್, ಸತೀಶ್, ರಾಬಿನ್ ಮತ್ತಿತರರು ಉಪಸ್ಥಿತರಿದ್ದರು.