×
Ad

ತಮಿಳುನಾಡು: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಕ್ಕೆ 11 ಬಲಿ,36 ಜನರಿಗೆ ಗಾಯ

Update: 2021-02-12 18:06 IST
photo: ANI

 ಚೆನ್ನೈ,ಫೆ.12: ತಮಿಳುನಾಡಿನ ವಿರುಧನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 11 ಜನರು ಮೃತಪಟ್ಟಿದ್ದು,36 ಜನರು ಗಾಯಗೊಂಡಿದ್ದಾರೆ.

  ಪ್ರಧಾನಿ ನರೇಂದ್ರ ಮೋದಿಯವರು ಈ ದುರಂತಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಮಧ್ಯಾಹ್ನ 1:30 ಸುಮಾರಿಗೆ ದುರಂತ ಸಂಭವಿಸಿದೆ. ರಾಸಾಯನಿಕಗಳನ್ನು ಮಿಶ್ರಗೊಳಿಸುತ್ತಿದ್ದಾಗ ಉಂಟಾದ ಘರ್ಷಣೆ ಸ್ಫೋಟಕ್ಕೆ ಕಾರಣವಾಗಿರುವಂತೆ ಕಂಡು ಬಂದಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೋರ್ವರು ತಿಳಿಸಿದರು.

 ವಿವಿಧೆಡೆಗಳಿಂದ ತರಿಸಲಾಗಿದ್ದ 10 ಅಗ್ನಿಶಾಮಕ ಯಂತ್ರಗಳು ಗಂಟೆಗಟ್ಟಲೆ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ಮೃತರ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂ. ಮತ್ತು ತೀವ್ರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ರೂ.ಪರಿಹಾರವನ್ನು ಘೋಷಿಸಿದ್ದಾರೆ. ಕೇಂದ್ರವು ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ.ಮತ್ತು ಗಾಯಾಳುಗಳಿಗೆ 50,000 ರೂ.ಪರಿಹಾರವನ್ನು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News