×
Ad

ಮೂರು ರಾಜ್ಯಗಳಲ್ಲಿ 7 ‘ಕಿಸಾನ್ ಮಹಾಪಂಚಾಯತ್’ ನಲ್ಲಿ ಭಾಗಿಯಾಗಲಿರುವ ರಾಕೇಶ್ ಟಿಕಾಯತ್

Update: 2021-02-12 18:10 IST

ಘಾಝಿಯಾಬಾದ್: ಈಗ ನಡೆಯುತ್ತಿರುವ ನೂತನ ಕೃಷಿ ಕಾನೂನುಗಳ ವಿರುದ್ಧ ಹೆಚ್ಚು ಬೆಂಬಲ ಪಡೆಯುವ ಉದ್ದೇಶದಿಂದ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ಮುಖಂಡ ರಾಕೇಶ್ ಟಿಕಾಯತ್ ರವಿವಾರದಿಂದ(ಫೆ.14)ಹರ್ಯಾಣ, ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಏಳು ಕಿಸಾನ್ ಮಹಾಪಂಚಾಯತ್‌ಗಳಲ್ಲಿ(ರೈತರ ಸಭೆ)ಭಾಗವಹಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರುವ ಈ ಸಭೆಗಳು ಫೆಬ್ರವರಿ 23ರಂದು ಕೊನೆಯಾಗಲಿದೆ ಎಂದು ಬಿಕೆಯು ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಹೇಳಿದ್ದಾರೆ.ಈ ಎಲ್ಲ ಕಿಸಾನ್ ಮಹಾಪಂಚಾಯತ್‌ಗಳು ಹರ್ಯಾಣದ ರೋಹ್ಟಕ್, ಕರ್ನಲ್, ಕೋಟಕ್, ಸಿರ್ಸಾ ಹಾಗೂ ಹಿಸಾರ್ ಜಿಲ್ಲೆಗಳಲ್ಲಿ ಹಾಗೂ ಮಹಾರಾಷ್ಟ್ರದ ಅಕೋಲ ಹಾಗೂ ರಾಜಸ್ಥಾನದ ಸಿಕಾರ್‌ನಲ್ಲಿ ನಡೆಯಲಿದೆ ಎಂದು ಮಲಿಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News