ಫೆ.20ಕ್ಕೆ ಪಲಿಮಾರು, ನಂದಿಕೂರು ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ಭೇಟಿ
Update: 2021-02-12 20:08 IST
ಉಡುಪಿ, ಫೆ.12: ಜಿಲ್ಲಾಧಿಕಾರಿ, ಕಂದಾಯ ಇಲಾಖೆಯ ಇತರ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರತಿ ತಿಂಗಳ ಮೂರನೇ ಶನಿವಾರ ಆಯ್ದ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿತು ಪರಿಹಾರಕ್ಕೆ ಪ್ರಯತ್ನಿಸುವಂತೆ ಹಾಗೂ ಗ್ರಾಮಸ್ಥರ ಕೋರಿಕೆಗಳು/ಅರ್ಜಿಗಳ ವಿಲೇವಾರಿ ವಾಡುವಂತೆ ಸರಕಾರ ಸುತ್ತೋಲೆಯಲ್ಲಿ ತಿಳಿಸಿದೆ.
ಅದರಂತೆ ಇದೇ ಫೆ.20ರ ಶನಿವಾರದಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಲಿಮಾರು ಗ್ರಾಪಂ ವ್ಯಾಪ್ತಿಯ ಪಲಿಮಾರು ಮತ್ತು ನಂದಿಕೂರು ಗ್ರಾಮಗಳಲ್ಲಿ ಗ್ರಾಮ ಭೇಟಿ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕರು/ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಅಥವಾ ಅರ್ಜಿಗಳನ್ನು ಮುಂಚಿತವಾಗಿ ಗ್ರಾಮಕರಣಿಕರಲ್ಲಿ ನೀಡಬಹುದಾಗಿದೆ. ಈ ಅರ್ಜಿಗಳನ್ನು ಗ್ರಾಮ ಭೇಟಿಯ ಸಂದರ್ದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.