ದಾರುಲ್ ಅಶ್-ಅರಿಯ್ಯ ಸುರಿಬೈಲ್: ಅಜ್ಮೀರ್ ಖ್ವಾಜಾ ಕಾವ್ಯ ಪುರಸ್ಕಾರಕ್ಕೆ ಆಯ್ಕೆ
Update: 2021-02-12 22:30 IST
ಬಂಟ್ವಾಳ, ಫೆ.12: ದಾರುಲ್ ಅಶ್-ಅರಿಯ್ಯ ಸುರಿಬೈಲ್ ಇದರ ಶರೀಅತ್ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್ ಮಸ್ಲಕುಲ್ ಹುನಫ ಸ್ಟೂಡೆಂಟ್ಸ್ ಅಸೋಸಿಯೇಶನ್ ಹಾಗೂ ಲಿಟರರಿ ಹಬ್ ಆಯೋಜಿಸಿದ ಸುಲ್ತಾನುಲ್ ಅಜ್ಮೀರ್ ಖ್ವಾಜಾರ ಸ್ಮರಣಾರ್ಥ ನಡೆಸಿದ ಸಮಷ್ಟಿ ಅಜ್ಮೀರ್ ಖ್ವಾಜಾ ಕಾವ್ಯ ಪುರಸ್ಕಾರ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ಪ್ರಥಮ ಪುರಸ್ಕಾರವನ್ನು ಶಾಫಿ ಅನ್ವರಿ ಕೊಡಗರಹಳ್ಳಿ, ದ್ವಿತೀಯ ಪುರಸ್ಕಾರವನ್ನು ಫಾತಿಮ ನಿಹಾಳ ರೈಹಾನ ನೇರಳಕಟ್ಟೆ, ತೃತೀಯ ಪುರಸ್ಕಾರವನ್ನು ಸಫ್ವಾನ್ ಅಳಕೆ ಪಡೆದಿದ್ದಾರೆ.
ರಾಜ್ಯದ ವಿವಿಧ ಕಡೆಯಿಂದ ಹಲವು ಕವಿಗಳು ಭಾಗವಹಿಸಿದ್ದು. ರವಿವಾರ ಸಂಜೆ ಅಶ್-ಅರಿಯ್ಯ ದಲ್ಲಿ ನಡೆಯಲಿರುವ ಅಜ್ಮೀರ್ ಆಂಡ್ ನೇರ್ಚೆಯಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಲಿಟರರಿ ಹಬ್ ವ್ಯವಸ್ಥಾಪಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.