×
Ad

ವಿದ್ಯಾ ಬಲ್ಲಾಳ್ ಕೆ. ರಿಗೆ ಡಾಕ್ಟರೇಟ್

Update: 2021-02-12 22:48 IST

ಉಡುಪಿ, ಫೆ.12: ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕಿ ಡಾ. ವಿದ್ಯಾ ಬಲ್ಲಾಳ್ ಕೆ. ಅವರು ಮಂಡಿಸಿದ ‘ಆನ್ ಎಕ್ಸ್‌ಪೆರಿಮೆಂಟ್ ಆ್ಯಂಡ್ ಕ್ಲಿನಿಕಲ್ ಇವ್ಯಾಲ್ಯುವೇಷನ್ ಆಫ್ ದಿ ಯುಟಿಲಿಟಿ ಆಫ್ ಚರಕೋಕ್ತ ಪ್ರಜಾಸ್ಥಾಪನಾ ಗನ ಔಷಧೀಸ್ ಆ್ಯಂಡ್ ಗರ್ಭಪಾಲ ರಸ ವಿದ್ ಸ್ಪೆಷಲ್ ರೆಫೆರೆನ್ಸ್ ಟು ಇಟ್ಸ್ ಆ್ಯಂಟಿ ಎಬಾರ್ಟಿಪಿಷೆಂಟ್ ಯ್ಯ್‌ಕ್ಟಿವಿಟಿ’ ಎನ್ನುವ ಮಹಾಸಂಶೋಧನಾ ಪ್ರಬಂಧಕ್ಕೆ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಡಾ. ಮಮತಾ ಕೆ.ವಿ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಅಧ್ಯಯನ ನಡೆಸಿರುವ ಡಾ.ವಿದ್ಯಾ ಬಲ್ಲಾಳ್ ಕೆ., ಕೇರಳದ ಸರಕಾರಿ ಆಯುರ್ವೇದ ಕಾಲೇಜಿನಿಂದ ಆಯುರ್ವೇದ ಪದವಿ ಪಡೆದು, ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಡಾ. ಕೆ.ಎಸ್. ಬಲ್ಲಾಳ್‌ರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News