ಸುಚೇತ ಕುಮಾರಿ ಎಂ.ಗೆ ಡಾಕ್ಟರೇಟ್
Update: 2021-02-12 22:49 IST
ಉಡುಪಿ, ಫೆ.12: ಉಡುಪಿ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಸುಚೇತ ಕುಮಾರಿ ಎಮ್. ಅವರು ಮಂಡಿಸಿದ ‘ಕಾಂಟ್ರಾಸೆಪ್ಟಿವ್ ಇಫೆಕ್ಟ್ ಆಫ್ ಜಪಾ ಕುಸುಮಾದಿ ಯೋಗ ಆನ್ ಫಿಮೇಲ್ ಆಲ್‌ಬಿನೊ ರಾಟ್ಸ್’ ಎನ್ನುವ ಮಹಾಸಂಶೋಧನಾ ಪ್ರಬಂಧಕ್ಕೆ ಮಹಾರಾಷ್ಟ್ರ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಾಸಿಕ್ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡಾ. ಸುಜಾತ ಕದಂ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸಿ ಮಹಾಪ್ರಬಂಧ ಮಂಡಿಸಲಾಗಿದೆ. ಡಾ. ಸುಚೇತ ಕುಮಾರಿ ಎಮ್. ಅವರು ಸರಕಾರಿ ಆಯುರ್ವೇದ ಕಾಲೇಜು ಬೆಂಗಳೂರು ಇಲ್ಲಿ ಆಯುರ್ವೇದ ಪದವಿ ಪಡೆದು, ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಇವರು ಸುಧಾಕರ ಶೆಣೈ ಇವರ ಪತ್ನಿ.