×
Ad

ಮಂಗಳೂರು: ಕರಾವಳಿ ಸಂಗೀತ ಕಲಾವಿದರ ಒಕ್ಕೂಟಕ್ಕೆ ನಿವೇಶನ ಭರವಸೆ

Update: 2021-02-12 23:46 IST

ಮಂಗಳೂರು: ಸಂಗೀತ ಕಲಾವಿದರ ಕ್ಷೇಮ, ಸಾಧನೆಗಳನ್ನು ಗುರುತಿಸಿ ರಚನಾತ್ಮಕ ಚಟುವಟಿಕೆಗಳನ್ನು ಸಂಘಟಿಸುವ ಕರಾವಳಿ. ಸಂಗೀತ ಕಲಾವಿದರ ಒಕ್ಕೂಟದ ಮನವಿಗೆ ಮಂಗಳೂರು ನಗರಪಾಲಿಕೆ ವ್ಯಾಪ್ತಿಯೊಳಗೆ ಒಂದು ನಿವೇಶನ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಪ್ರಯತ್ನ ಮಾಡಲಾಗುವುದು ಎಂದು ಮೇಯರ್ ದಿವಾಕರ್ ಪಾಂಡೇಶ್ವರ್ ಭರವಸೆ ನೀಡಿದರು.

ಪುರಭವನದಲ್ಲಿ ಜರಗಿದ ಒಕ್ಕೂಟದ 13ನೆ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ದೈಜಿವರ್ಲ್ಡ್ ಮೀಡಿಯಾ ನಿರ್ದೇಶಕರಾದ ವಾಲ್ಟರ್ ನಂದಳಿಕೆ, ಮಾಜಿ ಮೇಯರ್ ದಿವಾಕರ್ ಕದ್ರಿ, ಮತ್ಸ್ಯೋದ್ಯಮಿ ಮೋಹನ್ ಬೆಂಗ್ರೆ, ಭಗವತೀ ಸಹಕಾರ ಬ್ಯಾಂಕ್ ಅಧ್ಯಕ್ಷ ನಾರಾಯಣ ಕ., ಎಂ.ಆರ್.ಪಿ.ಎಲ್, ಪ್ರೊಜೆಕ್ಟ್ ಪ್ರಧಾನ ವ್ಯವಸ್ಥಾಪಕ ಬಿ. ಕಿರಣ್, ಮುಂಬೈಯ ವಚನಾ ಹೋಸ್ಟಿಟ್ಯಾಲಟಿ ಸರ್ವಿಸಸ್‌ನ ನಿರ್ದೇಶಕ ಚಂದ್ರಶೇಖರ ಎಸ್. ಶೆಟ್ಟಿ, ಕುಕ್ಕುಂದೂರು  ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದ ಸಾಧಕರುಗಳಾದ ಹಿರಿಯ ಕೊಂಕಣಿ ಗಾಯಕಿ ಮೀನಾ ಗ್ರಾಸಿಯ ರೆಂಬಿಬಸ್, ಗಿಟಾರಿಸ್ಟ್ ಗಣೇಶ್ ಕುಮಾರ್, ಗಾಯಕ ಬಾಲಿದ್ ಆರ್ ಪಿ.ಎ. ಅವರನ್ನು ಸನ್ಮಾನಿಸಲಾಯಿತು. ಸ್ವರಕುಡ್ಲ ಸ್ಪರ್ಧೆಯ ವಿಜೇತರುಗಳಾದ ಧಾರಿಣಿ ಕುಂದಾಪುರ (ಪ್ರಥಮ), ರಾಜೇಶ್ ಪ್ರಭು (ದ್ವಿತೀಯ), ಜೇಸನ್ ಲೋಬೊ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು.

ಸ್ಥಾಪಕಾಧ್ಯಕ್ಷ ಸದಾಶಿವ ದಾಸ್ ಪಾಂಡೇಶ್ವರ, ಪೂರ್ವಾಧ್ಯಕ್ಷರುಗಳಾದ ಜಗದೀಶ ಶೆಟ್ಟಿ, ದಾಮೋದರ ಭಾಗವತ್, ನವಗಿರಿ ಗಣೇಶ್, ರವೀಂದ್ರ ಪ್ರಭು, ಮಲ್ಲಿಕಾ ಶೆಟ್ಟಿ, ಉಡುಪಿ ವಲಯ ಉಪಾಧ್ಯಕ್ಷೆ ಮುಕ್ತಾ ಶ್ರೀನಿವಾಸ್, ಖಜಾಂಚಿ ಐವನ್ ರಿಚ್ಚರ್ಡ್ ಡಿಸೋಜ, ಹಾಗೂ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣ ಪ್ರಸಾದ್, ಸುಭಾಶಿತ್ ಉಡುಪಿ, ಜತೆ ಕಾರ್ಯದರ್ಶಿ ಜ್ಯೋತಿ ಚಂದ್ರಶೇಖರ, ಸಂಚಾಲಕ ಶರತ್ ಉಚ್ಚಿಲ್, ಹಾಗೂ ಸಮಿತಿಯ ರಂಜನ್‌ದಾಸ್, ಧನುರಾಜ್ ಅತ್ತಾವರ, ಸಂತೋಷ ಅಂಚನ್, ಹುಸೈನ್ ಕಾಟಿಪಳ್ಳ, ಕೆವಿನ್ ಮಸ್ಕತ್, ಕೇಶವ ಕನಿಲ, ರಾಧಾಕೃಷ್ಣ ಭಟ್, ಜನಾರ್ಧನ ಪದ್ಮಶಾಲಿ. ಸ್ವಪ್ನರಾಜ್, ಉಪಸ್ಥಿತರಿದ್ದರು.

ಒಕ್ಕೂಟದ ಅಧ್ಯಕ್ಷ ಮಹ್ಮದ್ ಇಕ್ವಾಲ್ ಸ್ವಾಗತಿಸಿದರು. ಗೌಸಲಹೆಗಾರ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿದರು. ಪ್ರ. ಕಾರ್ಯದರ್ಶಿ ರಮೇಶ್ ಸಾಲ್ಯಾನ್ ವರದಿ ಮಂಡಿಸಿದರು. ನವೀನ್ ಕೊಪ್ಪ ವಿಜೇತರ ಪಟ್ಟಿ ಓದಿದರು. ದಿನಕರ ಪಾಂಡೇಶ್ವರ, ಮೋಹನ ಪ್ರಸಾದ್, ಚಂದ್ರಶೇಖರ ಸನ್ಮಾನ ಪತ್ರ ವಾಚಿಸಿದರು. ಪೂರ್ವಾಧ್ಯಕ್ಷ ಮುರಳೀಧರ ಕಾಮತ್ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ವರ ಕುಡ್ಲ ವಿಜೇತರಿಂದ ಹಾಡು, ಒಕ್ಕೂಟದ ಸದಸ್ಯರಿಂದ ಸಮೂಹ ಗಾನ, ನೃತ್ಯ, ಜರಗಿತು. ಸಂಗೀತ ಹಿನ್ನಲೆ ವಾದನದಲ್ಲಿ ರಾಜ್‌ಗೋಪಾಲ್, ದೀಪಕ್, ರಾಜೇಶ್ ಭಾಗವತ್, ವಾಮನ ಕಾರ್ಕಳ, ವರುಣ್ ರಾವ್, ವಿನೋದ್, ಮುರಳಿ ಉಡುಪಿ, ಸುರೇಶ್ ಶೆಟ್ಟಿ ಪ್ರದೀಪ್ ಹಳೆಯಂಗಡಿ ಅವರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News