ಕೋಟ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Update: 2021-02-13 22:59 IST
ಕೋಟ, ಫೆ.13: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಬಿಲ್ಲಾಡಿ ಗ್ರಾಮದ ಒಂದಾಡಿ ಮಕ್ಕಿಮನೆ ಎಂಬಲ್ಲಿ ನಡೆದಿದೆ. ಮೃತರನ್ನು ಮಕ್ಕಿಮನೆ ನಿವಾಸಿ ಮಹಾಬಲ ಶೆಟ್ಟಿ(50) ಎಂದು ಗುರುತಿಸಲಾಗಿದೆ.
ಇವರು, ಮನೆಯ ತೆಂಗಿನ ಮರ ಹತ್ತಿ ಕಾಯಿಯನ್ನು ತೆಗೆದು ವಾಪಾಸು ಇಳಿಯುವಾಗ ಅಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.