ಕೋಟತಟ್ಟು ಮನೆಗೆ ಉಚಿತ ವಿದ್ಯುತ್ ಸಂಪರ್ಕ
Update: 2021-02-13 23:16 IST
ಕೋಟ: ಫೆ 13 ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾರ್ವತಿ ಮರಕಾಲ್ತಿ ಮನೆಗೆ ಹಂದಟ್ಟು ಸನಾತನ ಗ್ರಾಮೋತ್ಥಾನ ಟ್ರಸ್ಟ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ಇಂದು ಸಂಪೂರ್ಣ ಉಚಿತ ವಿದ್ಯುತ್ ಸಂಪರ್ಕ ವನ್ನು ಒದಗಿಸಲಾಯಿತು.
ಇದಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.
ಬಿಜೆಪಿ ಮುಖಂಡರಾದ ಪ್ರವೀಣ್ ಕುಮಾರ್ ಶೆಟ್ಟಿ, ಸುರೇಶ್ ಪೇತ್ರಿ, ಗಣಪ ಪೂಜಾರಿ, ಕೋಟತ್ತಟ್ಟು ಗ್ರಾಪಂ ಸದಸ್ಯರಾದ ವಾಸು ಪೂಜಾರಿ, ಪೂಜಾ, ಜ್ಯೋತಿ ಶ್ರೀನಿವಾಸ್, ಟ್ರಸ್ಟ್ ಸಂಚಾಲಕ ಹಾಗೂ ಕೋಟತಟ್ಟು ಗ್ರಾಪಂ ಸದಸ್ಯ ಪ್ರಕಾಶ್ ಹಂದಟ್ಟು ಮೊದಲಾದವರು ಉಪಸ್ಥಿತರಿದ್ದರು.