×
Ad

‘ಆತ್ಮನಿರ್ಭರ ಭಾರತ’ ಸೂಕ್ತ ಪರಿಕಲ್ಪನೆ: ಪ್ರೊ.ಎಂ.ಎಸ್.ಮೂಡಿತ್ತಾಯ

Update: 2021-02-13 23:30 IST

ಮಂಗಳೂರು, ಫೆ.13: ದೇಶದ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಂಡು ದೇಶವನ್ನು ಕಟ್ಟುವ ಅವಶ್ಯಕತೆಯಿದೆ. ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಆತ್ಮನಿರ್ಭರ ಭಾರತ ಎನ್ನುವುದು ಸೂಕ್ತ ಪರಿಕಲ್ಪನೆಯಾಗಿದೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಹೇಳಿದರು.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಜರುಗುತ್ತಿರುವ ದ.ಕ. ಜಿಲ್ಲಾ ಮಟ್ಟದ 24ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ‘‘ಆತ್ಮ ನಿರ್ಭರ ಭಾರತ’ ಎಂಬ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆತ್ಮನಿರ್ಭರತೆ ಎಂಬ ಪರಿಕಲ್ಪನೆ ಸುಂದರವಾಗಿದೆ. ಆದರೆ ಜಾಗತಿಕ ಹಳ್ಳಿ ಎನ್ನುವ ನೆಲೆಯಿಂದ ನೋಡುವಾಗ ಆ ಪರಿಕಲ್ಪನೆಯನ್ನು ನಮ್ಮಿಳಗೆಯೇ ಮಾತನಾಡುವುದು ಹಿತಕರ. ಯಾಕೆಂದರೆ ಇಂದು ಭಾರತೀಯರು ವಿದೇಶಗಳೆಲ್ಲೆಡೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ದೊಡ್ಡ ಜವಾಬ್ದಾರಿಯುತ ಹುದ್ದೆಗಳಲ್ಲೂ ಇದ್ದಾರೆ. ಎಲ್ಲರಿಗೆ ಅನುಕೂಲವಾಗುವಂತೆ ಕೊಡುಕೊಳ್ಳುವಿಕೆ ಗಮನದಲ್ಲಿರಿಸಿಕೊಂಡು ನಾವು ವರ್ತಿಸಬೇಕಾಗುತ್ತದೆ ಎಂದರು.

ಮೂಡುಬಿದಿರೆ ಎಸ್‌ಕೆಎಫ್ ಸಂಸ್ಥೆಯ ಜಿ.ರಾಮಕೃಷ್ಣ ಆಚಾರ್, ರಾಷ್ಟ್ರೀಯ ಅರ್ಥಶಾಸ ಅಧ್ಯಯನ ಪರಿಷತ್‌ನ ಶಶಾಂಕ ಭಿಡೆ, ಕಲ್ಬಾವಿ ಕ್ಯಾಶ್ಯೂಸ್‌ನ ಪ್ರಕಾಶ್ ಕಲ್ಬಾವಿ, ಹೈನುಗಾರಿಕೆ ಉದ್ಯಮಿ ಹರಿಕೃಷ್ಣ ತೋಡಿನ್ನಾಯ, ಎಂಸಿಎ್ಬ್ಯಾಂಕ್‌ನ ಚಂದ್ರಶೇಖರ ಎಂ. ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News