ಸೌದಿ ಅರೇಬಿಯ ಯುವರಾಜನಿಗೆ ಕರೆ ಮಾಡುವ ಯೋಜನೆಯಿಲ್ಲ: ಶ್ವೇತ ಭವನ

Update: 2021-02-13 19:00 GMT

ವಾಶಿಂಗ್ಟನ್, ಫೆ. 13: ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ಗೆ ಫೋನ್ ಕರೆ ಮಾಡುವ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೊಂದಿಲ್ಲ ಎಂದು ಶ್ವೇತಭವನ ತಿಳಿಸಿದೆ.

ಅಮೆರಿಕ-ಸೌದಿ ಅರೇಬಿಯ ಸಂಬಂಧದಲ್ಲಿ ಮಾನವಹಕ್ಕನ್ನು ಪ್ರಮುಖ ವಿಷಯವನ್ನಾಗಿ ಮಾಡಲು ಬಯಸಿದ್ದೇನೆ ಎಂದು ಬೈಡನ್ ಹೇಳಿದ್ದಾರೆ. 2020ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಅವರು ಈ ವಿಷಯವನ್ನು ಘೋಷಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ, ಸೌದಿ ಅರೇಬಿಯದ ವಾಸ್ತವಿಕ ಆಡಳಿತಗಾರನಾಗಿರುವ ಮುಹಮ್ಮದ್ ಬಿನ್ ಸಲ್ಮಾನ್‌ಗೆ ಕರೆ ಮಾಡುವ ಉದ್ದೇಶವನ್ನು ಜೋ ಬೈಡನ್ ಹೊಂದಿಲ್ಲ ಎಂದು ಹೇಳಿದರು.

 ಮ್ಯಾನ್ಮಾರ್‌ನ ನಗರ ಯಾಂಗನ್‌ನಲ್ಲಿ ಶನಿವಾರ ಸಾಂಪ್ರದಾಯಿಕ ವಸ್ತ್ರಗಳನ್ನು ತೊಟ್ಟು ಸೇನಾಡಳಿತದ ವಿರುದ್ಧ ಜನರು ಪ್ರತಿಭಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News