ʼಟೂಲ್‌ ಕಿಟ್‌ʼ ಎಡಿಟ್‌ ಮಾಡಿದ ಆರೋಪ: 21ರ ಹರೆಯದ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ಬಂಧಿಸಿದ ಪೊಲೀಸರು

Update: 2021-02-14 12:01 GMT

ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತಾದಂತೆ ಟ್ವೀಟ್‌ ಮಾಡಿದ್ದ ಖ್ಯಾತ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್‌ ರವರಿಗೆ ʼಟೂಲ್‌ ಕಿಟ್‌ʼ ಎಡಿಟ್‌ ಮಾಡಿ ನೀಡಿದ್ದಾರೆಂದು ಆರೋಪಿಸಿ ಬೆಂಗಳೂರಿನ 22ರ ಹರೆಯದ ಪರಿಸರ ಕಾರ್ಯಕರ್ತೆ ದಿಶಾ ರವಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. 5 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.

ಪೊಲೀಸರು ಅವರ ಮನೆಯಿಂದಲೇ ಬಂಧಸಿ ಕೊರೆದೊಯ್ಯುತ್ತಿರುವ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. ನ್ಯಾಯಾಲಯದಲ್ಲಿ ಕಣ್ಣೀರಿಟ್ಟ ದಿಶಾ, "ನಾನು ಗ್ರೆಟಾರಿಗೆ ನೀಡಿದ್ದ ಟೂಲ್‌ ಕಿಟ್‌ ನ ಎರಡು ಗೆರೆಯನ್ನು ಎಡಿಟ್‌ ಮಾಡಿ ಕೊಟ್ಟಿದ್ದೇನಷ್ಟೇ, ನಾನು ದೇಶದ ರೈತರಿಗೆ ಬೆಂಬಲ ನೀಡಿದ್ದೇನೆ" ಎಂದು ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದೆ. 

ದಿಶಾ ರವಿ ಬಂಧನದ ಕುರಿತಾದಂತೆ ಹಲವಾರು ಮಂದಿ ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಟೂಲ್‌ ಕಿಟ್‌ ಎಡಿಟ್ ಮಾಡಿದ್ದಾರೆಂಬ ಆರೋಪದಲ್ಲಿ 21ರ ಹರೆಯದ ಯುವತಿಯನ್ನು ಪೊಲೀಸರು ಬಂಧಿಸಿದ್ದಾದರೂ ಹೇಗೆ? ಶೀಘ್ರವೇ ದಿಶಾ ರವಿಯನ್ನು ಬಿಡುಗಡೆ ಮಾಡಬೇಕು ಎಂದು ಹಲವಾರು ಮಂದಿ ಟ್ವೀಟ್‌ ಮೂಲಕ ಆಗ್ರಹಿಸಿದ್ದಾರೆ. "ಅನ್ಯಾಯದ ವಿರುದ್ಧ ಧ್ವನಿಯೆತ್ತುವವರನ್ನು ಏನು ಮಾಡುತ್ತಾರೆನ್ನುವುದಕ್ಕೆ ನ್ಯೂಸ್‌ ಕ್ಲಿಕ್‌ ಕಚೇರಿಯ ಮೇಲಿನ ದಾಳಿ ಮತ್ತು ದಿಶಾ ರವಿ ಬಂಧನವೇ ಸಾಕ್ಷಿ. ಇದು ಪ್ರಾರಂಭವಷ್ಟೇ," ಎಂದು ಬಳಕೆದಾರರೋರ್ವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News