ಉಳ್ಳಾಲ: ಹಳೆಕೋಟೆಯಲ್ಲಿ ರಕ್ತದಾನ ಶಿಬಿರ
ಉಳ್ಳಾಲ: ಹಳೆವಿದ್ಯಾರ್ಥಿ ಸಂಘ ಮರ್ಖಲ್ ಇಸ್ಲಾಂ ಮದರಸ ಹಳೆಕೋಟೆ ಉಳ್ಳಾಲ ಇದರ ಆಶ್ರಯದಲ್ಲಿ ರೆಡ್‌ಕ್ರಾಸ್ ಮಂಗಳೂರು ಸಹಭಾಗಿತ್ವದಲ್ಲಿ ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ಸಹಕಾರದೊಂದಿಗೆ ನಡೆದಂತಹ ರಕ್ತದಾನ ಶಿಬಿರದಲ್ಲಿ 109 ಮಂದಿ ರಕ್ತದಾನಿಗಳು ರಕ್ತದಾನ ಮಾಡಿದರು. ಇದರಲ್ಲಿ 30 ಮಂದಿ ರಕ್ತದಾನಿಗಳು ಪ್ರಥಮ ಬಾರಿ ರಕ್ತದಾನ ಮಾಡಿದರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ, ಹಳೆಕೋಟೆ ಮಸೀದಿಯ ಅಧ್ಯಕ್ಷ ಹಾಜಿ ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮರ್ಖಲ್ ಇಸ್ಲಾಂ ಮದರಸ ಹಳೆಕೋಟೆ ಇದರ ಸದರ್ ಮುಹಲ್ಲಿಂ ಇರ್ಫಾನ್ ಮದನಿ ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೆಡ್‌ಕ್ರಾಸ್ ಮಂಗಳೂರು ಇದರ ಕಾರ್ಯನಿರ್ವಾಹಾಣಾಧಿಕಾರಿ ಪ್ರವೀಣ್ ರಕ್ತದಾನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಹಳೆಕೋಟೆ ಶಾಲಾ ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ, ಟೆಸ್ಟ್ ಸ್ಪೋರ್ಟ್ಸ್ ಅಧ್ಯಕ್ಷ ಅಬ್ದುಲ್ ರಹ್‌ಮಾನ್, ಹಳೆಕೋಟೆ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರವೂಫ್, ಕೋಶಾಧಿಕಾರಿ ಮುಹಮ್ಮದ್ ಹಳೆಕೋಟೆ, ಮುಸ್ಲಿಂ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಇಲ್ಯಾಸ್ ಹಾಜಬ್ಬ, ಸ್ಥಳೀಯ ಕೌನ್ಸಿಲರ್ ಝರೀನ ರವೂಫ್, ಅಲ್ತಾಫ್ ಯು.ಹೆಚ್, ಸಯ್ಯದ್ ಮದನಿ ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಎಂ.ಹೆಚ್ ಇಬ್ರಾಹಿಂ, ಸಫ್ವಾನ್ ಹಳೆಕೋಟೆ, ಇಮ್ರಾನ್ ಯು.ಎನ್, ಸಿರಾಜ್ ಹೊಂಬೆಳಕು, ಹುಸೈನ್, ಹಮೀದ್ ಪಜೀರ್, ಹಂಝ, ರಹ್ಮತ್ ಲತೀಫ್ ಐಸ್ ಮೊದಲಾದವರು ಭಾಗವಹಿಸಿದರು.
ಶರೀಫ್ ಎಸ್.ಎಮ್ ಎಫ್ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು
ಟೆಸ್ಟ್ ಸ್ಪೋರ್ಟ್ಸ್ ಹಳೆಕೋಟೆ, ಶೈನಿಂಗ್ ಸ್ಪೋರ್ಟ್ಸ್, ಹಳೆಕೋಟೆ, ಇಕ್ರಾ ಚಾರಿಟೇಬಲ್ ಟ್ರಸ್ಟ್, ಡ್ರೀಮ್ಸ್ ಇಂಡಿಯಾ ಫೌಂಡೇಶನ್, ಕಿಂಗ್ಸ್ ಹಳೆಕೋಟೆ, ಸಂಘ ಸಂಸ್ಥೆಗಳ ಒಕ್ಕೂಟದ ಸದಸ್ಯರು ಸಂಪೂರ್ಣ ಸಹಕಾರ ನೀಡಿದರು.
ಪ್ರತಿಯೊಬ್ಬ ರಕ್ತದಾನಿಗಳಿಗೂ ಸ್ಮರಣಿಕೆಯನ್ನು ಹಾಗೂ ಲಕ್ಕಿಕೂಪನ್ ನೀಡಲಾಗಿತ್ತು. ಲಕ್ಕಿ ಡ್ರಾದಲ್ಲಿ ಝಾಕೀರ್‌ರವರು ಮೊಬೈಲನ್ನು ಬಹುಮಾನವಾಗಿ ಪಡೆದುಕೊಂಡರು.
ಮುಹಮ್ಮದ್ ರಫೀಕ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಹಮ್ಮದ್ ಫೈರೋಝ್‌ರವರು ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಶಮೀರ್ ವಂದಿಸಿದರು.