×
Ad

ಕಿಕ್ ಬಾಕ್ಸಿಂಗ್ ನಲ್ಲಿ ಮುಂಡಗೋಡ ಯುವಕ ಅಂಬರೀಷ್ ಗೆ ಚಿನ್ನದ ಪದಕ

Update: 2021-02-14 18:58 IST

ಮುಂಡಗೋಡ: 12ನೇ ಕರ್ನಾಟಕ ಕಿಕ್ ಬಾಕ್ಸಿಂಗ್ ಕೆಡೆಟ್ ಚಾಂಪಿಯನ್ ಶಿಪ್ ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಶನ್ ಆಶ್ರಯದಲ್ಲಿ  ಮೈಸೂರಿನ ಯುವರಾಜ ಕಾಲೇಜ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಪಂದ್ಯಾವಳಿಯಲ್ಲಿ  ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದ ಯುವಕ ಅಂಬರೀಷ್ ಭಜಂತ್ರಿ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ಕೆಡೆಟ್ ಚಾಂಪಿಯನ್ ಶಿಪ್ ಪಡೆದು ಚಿನ್ನದ ಪದಕಗಳಿಸಿ ತಾಲೂಕಿಗೆ ಕೀರ್ತಿ ತಂದಿದ್ದಾನೆ.

ವಿಜೇತ ಅಂಬರೀಷ ಭಜಂತ್ರಿ ಅಂತರ್ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಮದನ ಗೌಡ ಅವರ ಹತ್ತಿರ ತರಬೇತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News