×
Ad

​ಕುತ್ತಾರ್-ದೇರಳಕಟ್ಟೆ ಸಮೀಪ ‘ಶಫ್ಕಾನ್ ರೆಸಿಡೆನ್ಸಿ’ ಉದ್ಘಾಟನೆ

Update: 2021-02-14 19:41 IST

ಮಂಗಳೂರು, ಫೆ.14: ನಗರ ಹೊರವಲಯದ ಕುತ್ತಾರ್-ದೇರಳಕಟ್ಟೆ ಬಳಿಯ ಶಾಂತಿಭಾಗ್‌ನಲ್ಲಿ ನಿರ್ಮಿಸಲಾದ ‘ಶಫ್ಕಾನ್ ರೆಸಿಡೆನ್ಸಿ’ ವಸತಿ ಸಮುಚ್ಚಯದ ಉದ್ಘಾಟನಾ ಕಾರ್ಯಕ್ರಮವು ರವಿವಾರ ನಡೆಯಿತು.

ಸೌದಿ ಅರೇಬಿಯಾದ ಉದ್ಯಮಿ ಅಹ್ಮದ್ ಶರೀಫ್ ಅವರು ವಸತಿ ಸಮುಚ್ಚಯವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿದ್ಯಾರ್ಥಿ ಮುಹಮ್ಮದ್ ಶಾಝಿನ್ ಬಾವ ‘ಪ್ಲೇ ಗ್ರೌಂಡ್’ ಉದ್ಘಾಟಿಸಿದರು.

ಈ ಸಂದರ್ಭ ರೆಸಿಡೆನ್ಸಿಯ ಮಾಲಕ ಹಾಗೂ ಆರ್ಕಿಟೆಕ್ ಶಫೀವುರ್ರಹ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

‘ಶಫ್ಕಾನ್ ರೆಸಿಡೆನ್ಸಿ’ ವಸತಿ ಸಮುಚ್ಚಯವು ಐದು ಮಹಡಿಯ ಕಟ್ಟಡವಾಗಿದ್ದು, 32 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಮಕ್ಕಳಿಗೆ ಆಟವಾಡಲು ಸ್ಥಳಾವಕಾಶ ಸಹಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ರೆಸಿಡೆನ್ಸಿಯ ಸಮೀಪ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News