ಬಾಳೆಪುಣಿಗೆ ಪಾವೂರು ಸ್ವಚ್ಚತಾ ಪ್ರೇಮಿಗಳ ನಿಯೋಗ ಭೇಟಿ
Update: 2021-02-14 19:43 IST
ಮಂಗಳೂರು, ಪೆ.14: ಪಾವೂರು ಗ್ರಾಪಂ ಉಪಾಧ್ಯಕ್ಷ ಹಾಗೂ ಸದಸ್ಯರಿದ್ದ ಸ್ವಚ್ಚತಾ ಪ್ರೇಮಿಗಳ ನಿಯೋಗ ರವಿವಾರ ಬಾಳೆಪುಣಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಮಾಹಿತು ಸಂಗ್ರಹಿಸಿತು.
ಪಾವೂರು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್ ಹಾಗೂ ಸದಸ್ಯ ವಲೇರಿಯನ್ ಡಿಸೋಜ ನೇತೃತ್ವದಲ್ಲಿ ಬಾಳೆಪುಣಿಯ ಸ್ವಚ್ಛತಾ ಸೇನಾನಿ ಇಸ್ಮಾಯೀಲ್‌ರ ಮನೆಗೆ ಭೇಟಿ ನೀಡಿ ಶೌಚಗುಂಡಿ ನಿರ್ಮಾಣ, ಹಸಿಕಸದಿಂದ ಸಾವಯವ ಗೊಬ್ಬರ ತಯಾರಿ, ನೀರಿಂಗಿಸುವ ಗುಂಡಿ ನಿರ್ಮಾಣ, ಕುಕ್ಕುಟ ಸಾಕಾಣೆ ಬಗ್ಗೆ ಮಾಹಿತಿ ಪಡೆದರು.
ಬಳಿಕ ಬಾಳೆಪುಣಿ ಘನತ್ಯಾಜ್ಯ ಘಟಕ ವೀಕ್ಷಿಸಿದರು. ಗ್ರಾಮದಲ್ಲಿ ಈಗಾಗಲೇ ಜನಶಿಕ್ಷಣ ಟ್ರಸ್ಟ್ ಪ್ರೇರಣೆಯಿಂದ 200 ಮನೆಗಳಲ್ಲಿ ಶೌಚಗುಂಡಿ ನಿರ್ಮಿಸಲಾಗಿದ್ದು, ಎಲ್ಲ ಮನೆಗಳಲ್ಲಿ ನಿರ್ಮಾಣ ಗುರಿ ಇದೆ ಎಂದು ಇಸ್ಮಾಯಿಲ್ ಮಾಹಿತಿ ನೀಡಿದರು.
ಈ ಸಂದರ್ಭ ಸ್ವಚ್ಚತಾ ಪ್ರೇಮಿಗಳಾದ ದೇವಿಪ್ರಸಾದ್ ಕಂಬಳಪದವು, ಕುಮಾರ ಮಜಿಕಟ್ಟ, ಅಶ್ಫಾಕ್ ಕಾನ ಮತ್ತಿತರರು ಉಪಸ್ಥಿತರಿದ್ದರು.