ಇನೋಳಿ ಜಾಮಿಯಾ ಮುಬಾರಕ್ ಮಸೀದಿಗೆ ನೂತನ ಪದಾಧಿಕಾರಿಗಳ ಆಯ್ಕೆ
Update: 2021-02-14 19:46 IST
ಮಂಗಳೂರು, ಫೆ.14: ಪಾವೂರು ಗ್ರಾಮದ ಇನೋಳಿಯ ಜಾಮಿಯಾ ಮುಬಾರಕ್ ಮಸೀದಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಹಿದಾಯತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಅಧ್ಯಕ್ಷ ಅಬ್ದುಲ್ ಖಾದರ್‌ರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ 2021-22ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಮೋನು ಚಕ್ಕರ್, ಗೌರವಾಧ್ಯಕ್ಷರಾಗಿ ಐ.ಹುಸೈನ್ ಕಡವು, ಉಪಾಧ್ಯಕ್ಷರಾಗಿ ಹೈದರ್ ಆಲಿ ಸಖಾಫಿ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಚ್.ಅಬ್ಬಾಸ್, ಕಾರ್ಯದರ್ಶಿಯಾಗಿ ಮಹಮ್ಮದ್ ಅನ್ಸಾರ್, ಕೋಶಾಧಿಕಾರಿಯಾಗಿ ಶಬೀರ್ ಕಾಲ್ಲಾಜೆ, ಲೆಕ್ಕ ಪರಿಶೋಧಕರಾಗಿ ಸಮದ್ ಮುಕ್ರಿ, ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ್ ಎ ಸೈಟ್, ಇಕ್ಬಾಲ್ ಐ.ಕೆ., ಹುಸೈನ್ ಬಾವು, ಸಲೀಂ ಕಕ್ಕೆಬೊಟ್ಟು, ಅಕ್ರಂ ಬಿ ಸೈಟ್, ಇಸ್ಮಾಯಿಲ್ ಕಿಲ್ಲೂರ್, ಲತೀಫ್ ನಂದಾರ್, ಅಶ್ಫಾಕ್ ಕಾನ ಆಯ್ಕೆಯಾದರು.