×
Ad

ಕೆಎಸ್‌ಸಿಎ 19 ವರ್ಷದೊಳಗಿನವರ ಅಂತರ್‌ವಲಯ ಕ್ರಿಕೆಟ್: ಮೈಸೂರು, ಶಿವಮೊಗ್ಗ ವಲಯಗಳನ್ನು ಮಣಿಸಿದ ಮಂಗಳೂರು ವಲಯ

Update: 2021-02-14 20:24 IST
ಮಹಮ್ಮದ್ ಅಝಾನ್‌ತೋಟ

ಉಡುಪಿ, ಫೆ.14: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ 19 ವರ್ಷ ಕೆಳಹರೆಯದವರ ಕ್ರಿಕೆಟ್ ಪಂದ್ಯಾಟದಲ್ಲಿ ಮಂಗಳೂರು ವಲಯ, ಮೈಸೂರು ಮತ್ತು ಶಿವಮೊಗ್ಗ ವಲಯ ತಂಡಗಳನ್ನು ಮಣಿಸಿ ಪಾರಮ್ಯ ಮೆರೆದಿದೆ.

ಮೈಸೂರು ವಲಯದ ವಿರುದ್ಧದ ಪಂದ್ಯದಲ್ಲಿ ಮಂಗಳೂರು ವಲಯದ ಮಹಮ್ಮದ್ ಅಝಾನ್ ತೋಟ ಅವರು 7 ಸಿಕ್ಸ್ ಮತ್ತು 10 ಬೌಂಡರಿ ಸಹಿತ ಬಾರಿಸಿದ ಶತಕದ (118 ರನ್) ನೆರವಿನಿಂದ ತಂಡ ಜಯ ದಾಖಲಿಸಿತು. ಮಂಗಳೂರು ವಲಯ ನಿಗದಿತ 50 ಓವರುಗಳಲ್ಲಿ 294 ರನ್‌ಗಳಿಸಿತು. ಹಾರ್ದಿಕ್ ಸುವರ್ಣ 86 ರನ್‌ಗಳ ಕೊಡುಗೆ ನೀಡಿತು.

ಉತ್ತರವಾಗಿ ಮೈಸೂರು ವಲಯ ಮನ್ವಂತ್ ಅವರ 79 ರನ್‌ಗಳ ಹೊರತಾಗಿಯೂ ನಿಗದಿತ 50 ಓವರುಗಳಲ್ಲಿ 231 ರನ್‌ಗಳನ್ನಷ್ಟೆ ಗಳಿಸಲು ಶಕ್ತವಾಗಿ 24 ರನ್‌ಗಳ ಅಂತರದ ಸೋಲನ್ನು ಕಂಡಿತು. ಮಂಗಳೂರಿನ ಅದ್ವೈತ್ 45ಕ್ಕೆ3, ಅಝಾನ್ 38ಕ್ಕೆ 2 ವಿಕೆಟ್‌ಗಳನ್ನು ಪಡೆದರು.

ಮತ್ತೊಂದು ಪಂದ್ಯದಲ್ಲಿ ಮಂಗಳೂರು ವಲಯ, ಶಿವಮೊಗ್ಗ ವಲಯವನ್ನು 57 ರನ್‌ಗಳ ಅಂತರದಿಂದ ಮಣಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ವಲಯ ಋಷಿ(56) ಮತ್ತು ರಾಹುಲ್ (36) ಇವರ ಜವಾಬ್ದಾರಿಯುತ ಬ್ಯಾಟಿಂಗ್ ನೆರನಿಂದ 205 ರನ್ ದಾಖಲಿಸಿತು.
ಬಳಿಕ ಮಂಗಳೂರು ತಂಡದ ಸಂಘಟಿತ ಬೌಲಿಂಗ್ ದಾಳಿ ಮತ್ತು ಚುರುಕಿನ ಕ್ಷೇತ್ರ ರಕ್ಷಣೆಯಿಂದ ಶಿವಮೊಗ್ಗ ತಂಡ 148 ರನ್‌ಗಳಿಗೆ ಆಲೌಟಾಯಿತು. ಶಿವಮೊಗ್ಗದ ಶ್ರವಣ್ ಬಾಬು (49) ಮತ್ತು ಋಷಬ್ (43) ಮಾತ್ರ ಪ್ರತಿರೋಧ ತೋರಿದರು. ಮಂಗಳೂರು ತಂಡದ ಪರವಾಗಿ ಅಧ್ವೈತ್, ಅಝಾನ್, ವಿನಾಯಕ ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News