ರಾಷ್ಟ್ರೀಯ ಚಾಂಪಿಯನ್‌ಶಿಪ್
ರಾಂಚಿ, ಫೆ.14: ಇಲ್ಲಿ ನಡೆದ 8ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರೇಸ್ ವಾಕರ್ ಗುರ್‌ಪ್ರೀತ್ ಸಿಂಗ್ ಪುರುಷರ 50 ಕಿ.ಮೀ ಓಟದ ನಡಿಗೆಯಲ್ಲಿ ಮೊದಲ ಸ್ಥಾನ ಗಳಿಸುವುದರೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಗುರ್‌ಪ್ರೀತ್ ಮೂರು ಗಂಟೆ, 59 ನಿಮಿಷ ಮತ್ತು 42 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದರು.
ಶನಿವಾರ ಸಂದೀಪ್ ಕುಮಾರ್, ರಾಹುಲ್ ಕುಮಾರ್ ಮತ್ತು ಪ್ರಿಯಾಂಕಾ ಗೋಸ್ವಾಮಿ ಅವರು 20 ಕಿ.ಮೀ ಓಟದಲ್ಲಿ ಜಯಿಸಿ ಮುಂದಿನ ವರ್ಷ ಜುಲೈ 15 ರಿಂದ 24 ರವರೆಗೆ ನಡೆಯಲಿರುವ 20 ಕಿ.ಮೀ ಓರೆಗಾನ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದರು. ಟೋಕಿಯೋ ಒಲಿಂಪಿಕ್ಸ್‌ನ ಕೋಟಾವನ್ನು ಪಡೆದುಕೊಳ್ಳಲು ಈ ಗೆಲುವುಗಳು ಸಹಕಾರಿಯಾದವು.
ಸಂದೀಪ್ ಮತ್ತು ಪ್ರಿಯಾಂಕಾ ತಮ್ಮ ಗೆಲುವಿನಲ್ಲಿ ರಾಷ್ಟ್ರೀಯ ದಾಖಲೆಗಳನ್ನು ಮುರಿದರು.
ಸಂದೀಪ್ ಒಂದು ಗಂಟೆ , 20 ನಿಮಿಷ ಮತ್ತು 16 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ಒಲಿಂಪಿಕ್ಸ್‌ಗೆ ಅರ್ಹತಾ ಸಮಯ1:21 ಆಗಿದೆ. ರಾಹುಲ್ 1ಗಂಟೆ , 20 ನಿಮಿಷ ಮತ್ತು 26 ಸೆಕೆಂಡ್‌ಗಳಲ್ಲಿ ಅಂತಿಮ ಗೆರೆಯನ್ನು ದಾಟಿ ಬೆಳ್ಳಿ ಗೆದ್ದರು.
24ರ ಹರೆಯದ ಪ್ರಿಯಾಂಕಾ ಒಂದು ಗಂಟೆ, 28 ನಿಮಿಷ 45 ಸೆಕೆಂಡುಗಳ ಸಮಯದೊಂದಿಗೆ ಗುರಿ ತಲುಪಿದ್ದರು. ರಾವತ್‌ಗೆ ಚಿನ್ನ: ಉತ್ತರಾಖಂಡದ ಒಲಿಂಪಿಯನ್ ಮನೀಷ್ ರಾವತ್ ಪುರುಷರ ಚೊಚ್ಚಲ ನ್ಯಾಶನಲ್ ಓಪನ್ ವಾಕಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ದಿನವಾಗಿರುವ ರವಿವಾರ 35 ಕಿ.ಮೀ ನಡಿಗೆಯಲ್ಲಿ ಚಿನ್ನ ಜಯಿಸಿದ್ದಾರೆ. ತಮಿಳುನಾಡಿನ ಗಣಪತಿ ಕೃಷ್ಣ (2:49:12) ಅವರನ್ನು 9 ನಿಮಿಷಗಳ ಅಂತರದಲ್ಲಿ ಹಿಂದಿಕ್ಕಿವ ಮೂಲಕ ಅಗ್ರಸ್ಥಾನ ಪಡೆದರು. ಮುಂದಿನ ವರ್ಷದ ವರ್ಲ್ಡ್ ಅಥ್ಲೆಟಿಕ್ಸ್ ಚಂಪಿಯನ್‌ಶಿಪ್‌ಗೆ ಅವಕಾಶ ಪಡೆದರು