ಸಮಸ್ತ ಸಂದೇಶ ಅಭಿಯಾನ ಯಶಸ್ವಿಗೆ ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ಕರೆ
ಬಂಟ್ವಾಳ: ಸಮಸ್ತ ಕೇರಳ ಜಂಇಯ್ಶತುಲ್ ಉಲಮಾ ಕರ್ನಾಟಕ ಸಮಿತಿ ವತಿಯಿಂದ ಫೆಬ್ರವರಿ 16 ರಿಂದ ಎಪ್ರಿಲ್ 30 ರವರೆಗೆ ನಡೆಯುವ ಸಮಸ್ತ ಸಂದೇಶ ಅಭಿಯಾನದ ಉದ್ಘಾಟನಾ ಸಮಾರಂಭವು ಫೆಬ್ರವರಿ16 ರಂದು ಸಂಜೆ 4 ಗಂಟೆಗೆ ಮಿತ್ತಬೈಲ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿ ಕರೆ ನೀಡಿದೆ.
ಸಂದೇಶ ಕ್ಯಾಂಪೈನ್ ನಲ್ಲಿ ವಿವಿಧ ಯೋಜನೆಗಳೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ
ಇತ್ತೀಚೆಗೆ ಕೋಡಾಜೆ ಮದ್ರಸ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕರೆ ನೀಡಲಾಯಿತು.
ಕೊಡಾಜೆ ಮದರಸ ಹಾಲ್ ನಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ಸಯ್ಯದ್ ಅಮೀರ್ ತಂಙಳ್ ಕಿನ್ಯ ವಹಿಸಿದ್ದರು.
ಸಭೆಯನ್ನು ಜಿಲ್ಲಾ ಉಪಾಧ್ಯಕ್ಷ ತಾಜುದ್ದೀನ್ ರಹ್ಮಾನಿ ಉದ್ಘಾಟಿಸಿದರು. ಜಿಲ್ಲಾ ಕೋಶಾದಿಕಾರಿ ಹನೀಫ್ ದೂಮಲಿಕೆ, ಉಪಾಧ್ಯಕ್ಷ ಝಕರಿಯ್ಯ ಮುಸ್ಲಿಯಾರ್ ಆತೂರು, ಕಾರ್ಯದರ್ಶಿ ಇಕ್ಬಾಲ್ ಬಾಳಿಲ, ಅಬ್ದುಲ್ ಖಾದರ್ ಕಣ್ಣೂರು, ಶರೀಫ್ ಕೆಲಿಂಜ, ಆರ್ಗನೈಝಿಂಗ್ ಕಾರ್ಯದರ್ಶಿ ರಫೀಕ್ ಪೈಝಿ, ರಿಯಾಝ್ ರಹ್ಮಾನಿ, ಪಿ.ಎ.ಝಕರಿಯ್ಯ ಮೌಲವಿ ಮರ್ಧಾಳ, ಸದಸ್ಯರಾದ ರಶೀದ್ ರಹ್ಮಾನಿ, ಜಾಬೀರ್ ಪೈಝಿ, ಅಶ್ರಫ್ ಕಡಬ, ಹಕೀಂ ಬಂಗೇರಕಟ್ಟೆ ಮುಂತಾದವರು ಭಾಗವಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಸ್ವಾಗತಿಸಿ ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ಆರೀಫ್ ಬಡಕಬೈಲ್ ವಂದಿಸಿದರು.