ಬ್ರಹ್ಮಾವರ: ನೆರೆಮನೆಯ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಪ್ರಶ್ನಿಸಿದಕ್ಕೆ ವ್ಯಕ್ತಿಯ ಕೊಲೆ

Update: 2021-02-15 17:43 GMT

ಬ್ರಹ್ಮಾವರ, ಫೆ.15: ನೆರೆಕರೆಯ ವಿವಾಹಿತ ಮಹಿಳೆಯ ಮನೆಗೆ ಬರುತ್ತಿರುವುದನ್ನು ಪ್ರಶ್ನಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎ ಘಟನೆ ಫೆ.14ರಂದು ರಾತ್ರಿ ವೇಳೆ ಹೊಸೂರು ಗ್ರಾಮದ ಉದ್ಧಳ್ಕ ಎಂಬಲ್ಲಿ ನಡೆದಿದೆ.

 ಕೊಲೆಯಾದವರನ್ನು ಉದ್ಧಳ್ಕ ನಿವಾಸಿ ನವೀನ್ ನಾಯ್ಕ ಯಾನೆ ಗುಂಡ(43) ಎಂದು ಗುರುತಿಸಲಾಗಿದೆ. ಮಲ್ಪೆಯ ನಿವಾಸಿಗಳಾದ ಗೌತಮ್(27), ಮನೋಜ್ ಭಂಡಾರಿ(30), ಧನುಷ್(27), ಚೇತನ್ ಕುಮಾರ್(24), ತಿಲಕರಾಜ್(36), ಕದಿಕೆಯ ಸಿದ್ದಾರ್ಥ(23) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ ಮಾರುತಿ ರಿಟ್ಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ನವೀನ್ ನಾಯ್ಕ ಮನೆಯ ಹತ್ತಿರ ಸರಸ್ವತಿ ಎಂಬವರ ಮನೆಗೆ ಗೌತಮ್ ಬರುತ್ತಿದ್ದನು. 15 ದಿನಗಳ ಹಿಂದೆ ಸರಸ್ವತಿ ಮತ್ತು ಗೌತಮ್ ಗುಡ್ಡೆಯಂಗಡಿ ಕ್ರಾಸ್ ಬಳಿ ಜೊತೆಯಲ್ಲಿದ್ದಾಗ ನವೀನ್ ನಾಯ್ಕಾ, ನೀನು ಯಾಕೆ ಸರಸ್ವತಿ ಮನೆಗೆ ಆಗಾಗ ಬರುತ್ತಿದ್ದಿ ಎಂದು ಗೌಮತ್‌ನನ್ನು ಕೇಳಿದ್ದರು. ಈ ವಿಚಾರದಲ್ಲಿ ಇವರಿಬ್ಬರಿಗೂ ಗಲಾಟೆಯಾಗಿ ಗೌತಮ್ ಕೊಲೆ ಮಾಡುವುದಾಗಿ ನವೀನ್ ನಾಯ್ಕಿಗೆ ಜೀವ ಬೆದರಿಕೆ ಹಾಕಿದ್ದಾರೆಂದು ದೂರಲಾಗಿದೆ.

ಇದೇ ಧ್ವೇಷದಲ್ಲಿ ಗೌತಮ ಇತರರೊಂದಿಗೆ ಕಾರಿನಲ್ಲಿ ನವೀನ್ ನಾಯ್ಕ ಮನೆಗೆ ಬಂದು ಆಯುಧದಿಂದ ಎದೆಗೆ, ಮುಖಕ್ಕೆ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 ಗಂಟೆಯೊಳಗೆ ಆರೋಪಿಗಳ ಬಂಧನ
ಕೊಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲು ಎಸ್ಪಿ ವಿಷ್ಣುವರ್ಧನ ಮತ್ತು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಂತೆ ಡಿವೈಎಸ್ಪಿ ಸದಾನಂದ ನಾಯ್ಕ್ ನಿರ್ದೇಶನದಂತೆ ತನಿಖಾ ತಂಡಗಳನ್ನು ರಚಿಸಲಾಗಿತ್ತು.

ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಬ್ರಹ್ಮಾವರ ಎಸ್ಸೈ ಗುರುನಾಥ ಬಿ ಹಾದಿಮನಿ, ಮಲ್ಪೆಎಸ್ಸೈ ತಿಮ್ಮೇಶ ನೇತೃತ್ವದ ತಂಡವು ಕೃತ್ಯ ಎಸಗಿದ 24 ಗಂಟೆಯೊಳಗೆ ಎಲ್ಲ ಆರೋಪಿಗಳನ್ನು ಫೆ.15ರಂದು ಉುಪಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News