ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನಕ್ಕೆ ಡಿವೈಎಫ್ಐ- ಎಸ್ಎಫ್ಐ ಖಂಡನೆ

Update: 2021-02-15 11:41 GMT

ಮಂಗಳೂರು: ಕೇಂದ್ರ ಸರಕಾರದ ಮೂರು ಕೃಷಿ ಸಂಬಂಧಿ ಕಾಯಿದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ಟೂಲ್ ಕಿಟ್  ತಯಾರಿಸಿದ ಆರೋಪ ಹೊರಿಸಿ ಕೇಂದ್ರ ಸರಕಾರವು ಪರಿಸರ ಹಾಗೂ ಸಾಮಾಜಿಕ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಕ್ರೂರ ಧಾಳಿಯಾಗಿದೆ‌. ಕೂಡಲೇ ದಿಶಾ ರವಿ ಅವರನ್ನು ಬಿಡುಗಡೆಗೊಳಿಸಬೇಕೆಂದು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿಗಳು ಸರಕಾರವನ್ನು ಒತ್ತಾಯಿಸಿದೆ.

ಸರಕಾರದ ದೃಷ್ಠಿಯಲ್ಲಿ ಜನತೆ ರೈತರ ಹೋರಾಟಕ್ಕೆ ಬೆಂಬಲಿಸುವುದು ಅಪರಾಧವಾಗಿ ಕಾಣುತ್ತಿರುವುದು ಅಪಾಯಕಾರಿಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಹೊರಟಿರುವ ಕೇಂದ್ರ ಸರಕಾರದ ಈ ಫ್ಯಾಸಿಸ್ಟ್ ನೀತಿಯು ಆಳುವ ಸರಕಾರದ ವಿರುದ್ಧ ಜನತೆ ಧ್ವನಿ ಎತ್ತುವದನ್ನು ಅಡಗಿಸಲು ಬೆದರಿಕೆಯ ಮೂಲಕ ತಡೆಯುವ ಹುನ್ನಾರವಾಗಿದೆ. ಸರಕಾರದ ಈ ಸರ್ವಾಧಿಕಾರಿ ಧೋರಣೆಯ ವಿರುದ್ದ ಫೆ.16 ರಂದು ರಾಜ್ಯವ್ಯಾಪಿ ಜಂಟಿ ಪ್ರತಿಭಟನೆಗೆ ಕರೆ ನೀಡಿದ್ದು, ವಿದ್ಯಾರ್ಥಿ-ಯುವಜನರು ಹಾಗೂ ರೈತಪರ-ಪ್ರಜಾಪ್ರಭುತ್ವಪರ ಜನತೆ ಐಕ್ಯ ಹಾಗೂ ತೀವ್ರ ಹೋರಾಟ ನಡೆಸಲು ಮುಂದಾಗಬೇಕು ಎಂದು ಮನವಿ ಮಾಡುತ್ತೇವೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News