ಬಾಳೆಪುಣಿ: ಪಂಚಾಯತಿ ಅಧ್ಯಕ್ಷರಾಗಿ ರಝಿಯಾ, ಉಪಾಧ್ಯಕ್ಷರಾಗಿ ಲಕ್ಷ್ಮೀ ಆಯ್ಕೆ

Update: 2021-02-15 12:27 GMT

ಕೊಣಾಜೆ: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸೋಮವಾರ ಅಪರಾಹ್ನ ನಡೆಯಿತು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಝಿಯಾ 20 ಮತಗಳನ್ನು ಪಡೆದು ಅಧ್ಯಕ್ಷರಾಗಿ ಚುನಾಯಿತರಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಲಕ್ಷ್ಮಮ್ಮ ಯಾನೆ ಎಂ.ಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾಲತಿ 7 ಮತಗಳನ್ನು ಪಡೆದರು. ಒಬ್ಬ ಸದಸ್ಯರು ಗೈರು ಹಾಜರಾಗಿದ್ದರು. ಒಂದು ಮತ ಪತ್ರವನ್ನು ಅಸಿಂಧು ಎಂದು ಪರಿಗಣಿಸಲಾಯಿತು.

ಬಾಳೆಪುಣಿ ಮತ್ತು ಕೈರಂಗಳ ಗ್ರಾಮಗಳನ್ನು ಒಳಗೊಂಡಿರುವ ಬಾಳೆಪುಣಿ ಗ್ರಾಮ ಪಂಚಾಯತಿ ಬಂಟ್ವಾಳ ತಾಲೂಕಿನ ಎರಡನೆಯ ಅತೀ ದೊಡ್ಡ ಗ್ರಾಮ ಪಂಚಾಯತು ಆಗಿದೆ. ಪಂಚಾಯತು ಒಟ್ಟು 29  ಸದಸ್ಯರನ್ನು ಹೊಂದಿದೆ.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ನೋಣಯ್ಯ ನಾಯ್ಕ್  ಎನ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಂಚಾಯತು ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಸಹಕರಿದರು.

ಬಾಳೆಪುಣಿ ಗ್ರಾಮ ಪಂಚಾಯತು ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಹುದ್ದೆ ಹಿಂದುಳಿದ ವರ್ಗ ಎ ಮಹಿಳೆಗೆ ನಿಗದಿಯಾಗಿತ್ತು. 

ಈ ಸಂದರ್ಭದಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಮುಖಂಡರಾದ ನಾಸೀರ್ ನಡುಪದವು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಇಬ್ರಾಹಿಂ ಹಾಜಿ ನಡುಪದವು, ಅರುಣ್ ಡಿಸೋಜ, ಶರೀಫ್ ಚೆಂಬೆತೋಟ, ಮುರಳೀಧರ್‌ ಶೆಟ್ಟಿ, ಬಶೀರ್ ಮುಡಿಪು, ಹನೀಫ್, ಕಾಯಾರು ಅಬ್ಬು, ಲೀಲಾವತಿ ಬಾಳೆಪುಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News