‘ಮಾಸ್ಟರ್ ಲಿಟಲ್ ಬೆಂಗಳೂರು’ ಫ್ಯಾಶನ್ ಶೋನಲ್ಲಿ ವಂಶಿಕಗೆ ಪ್ರಶಸ್ತಿ

Update: 2021-02-15 13:09 GMT

ಉಡುಪಿ, ಫೆ.15: ಪಿ.ಕೆ.ಪ್ರೊಡಕ್ಷನ್ ಹಾಗೂ ಸ್ಟಾರ್ ಝೋನ್ ಫ್ಯಾಷನ್ ಸಂಸ್ಥೆಯ ವತಿಯಿಂದ ಪವನ್ ಪಿ.ಕೆ. ಹಾಗೂ ಸೌಂದರ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಜ.16ರಂದು ನಡೆದ ‘ಮಾಸ್ಟರ್ ಮಿಸ್ ಲಿಟಲ್ ಬೆಂಗಳೂರು 2020-21’ ಫ್ಯಾಷನ್ ಶೋನಲ್ಲಿ ಬೈಂದೂರು ಮೂಲದ ಬೆಂಗಳೂರಿನ ವಂಶಿಕ ಜಿ.ಆಚಾರ್ ಮತ್ತು ಪವನ್ ಕುಮಾರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಇದರಲ್ಲಿ ಸುಮಾರು 400ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದು, ಇದರಲ್ಲಿ ಕೇವಲ 25 ಮಕಳು ಫಿನಾಲೇ ಹಂತ ತಲುಪಿದ್ದರು. 10 ವರ್ಷದ ವಂಶಿಕಗೆ ಮಿಸ್ ಟ್ಯಾಲೆಂಟೆಡ್ ಎಂಬ ಸಬ್ ಟೈಟಲ್ ನೀಡಲಾಗಿದೆ. ವಂಶಿಕ ಅವರ ತಂದೆ ತಾಯಿ ಬೈಂದೂರಿನ ತಾಲೂಕಿನ ಕಾಲ್ತೋಡು ಗ್ರಾಮದ ನಿವಾಸಿಗಳಾಗಿದ್ದು, ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News