​ಕೋವಿಡ್: ಎರಡನೇ ಹಂತದ ಲಸಿಕೆ ಆರಂಭ

Update: 2021-02-15 15:18 GMT

ಮಂಗಳೂರು, ಫೆ.15: ಕೋವಿಡ್-19 ಲಸಿಕೆಯನ್ನು ಈಗಾಗಲೇ ಮೊದಲನೆಯ ಹಂತದಲ್ಲಿ, ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ, ನೋಂದಾವಣೆಗೊಂಡ ಖಾಸಗಿ ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪಡೆದಿರುತ್ತಾರೆ. ಈಗಾಗಲೇ ನೋಂದಣಿಗೊಂಡು ಬಾಕಿ ಉಳಿದ ಸಿಬ್ಬಂದಿ ಲಸಿಕೆಯನ್ನು ಪಡೆಯಲು ಫೆ.25ರವರೆಗೆ ಕಾಲಾವಕಾಶ ನೀಡಲಾಗಿದೆ.

ಹೆಲ್ತ್ ಕೇರ್ ವರ್ಕರ್ಸ್‌ನ ಎರಡನೇ ಹಂತದ ಲಸಿಕೆಯನ್ನು ಫೆ.15ರಿಂದ ಆರಂಭಿಸಲಾಗಿದ್ದು, ಮೊದಲನೇಯ ಹಂತದಲ್ಲಿ ಲಸಿಕೆಯನ್ನು ಪಡೆದ ಎಲ್ಲ ಫಲಾನುಭವಿಗಳು ಎರಡನೇ ಹಂತದ ಲಸಿಕೆಯನ್ನು ಪಡೆಯಬಹುದಾಗಿದೆ.

ಫ್ರೆಂಟ್‌ಲೈನ್ ವರ್ಕರ್ಸ್‌ಗೆ ಕೋವಿಡ್ ಲಸಿಕೆಯನ್ನು ಪಡೆಯಲು ಈಗಾಗಲೇ ಚಾಲನೆ ದೊರಕಿದ್ದು, ಲಸಿಕೆ ಪಡೆಯಲು ಬಾಕಿ ಉಳಿದಿರುವ ಫಲಾನುಭವಿಗಳು ಫೆ.17ರೊಳಗೆ ನೋಂದಣಿ ಮಾಡಬಹುದಾಗಿದೆ. ಇವರಿಗೆ ಮಾರ್ಚ್ 6ರವರೆಗೆ ಲಸಿಕೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಎಲ್ಲ ಫಲಾನುಭವಿಗಳು ಲಸಿಕೆಯನ್ನು ತಾಲೂಕುಗಳ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಎಲ್ಲ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಪಡೆಯಬಹುದು. ಒಂದು ವೇಳೆ ಲಸಿಕೆ ಪಡೆಯುವ ಬಗ್ಗೆ ಎಸ್‌ಎಂಎಸ್ ಬಾರದಿದ್ದರೂ, ಹತ್ತಿರದ ಲಸಿಕಾ ಕೇಂದ್ರದಲ್ಲಿ ಲಸಿಕೆಯನ್ನು ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News