ಹೋರಾಟಗಾರ್ತಿ ದಿಶಾ ರವಿ ಬಿಡುಗಡೆಗೆ ಪ್ರಿಯಾಂಕಾ ಗಾಂಧಿ ಆಗ್ರಹ

Update: 2021-02-15 16:44 GMT

ಹೊಸದಿಲ್ಲಿ, ಫೆ.15: ಗ್ರೆಟಾ ಥನ್‌ಬರ್ಗ್ ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಹವಾಮಾನ ಹೋರಾಟಗಾರ್ತಿ ದಿಶಾ ರವಿಯನ್ನು ಬೆಂಬಲಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ದಿಶಾರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

“ನಿರಾಯುಧ ಹುಡುಗಿಯೊಬ್ಬಳು ಶಸ್ತ್ರಸಜ್ಜಿತರಾದವರಲ್ಲಿ ಭೀತಿ ಮೂಡಿಸಿದ್ದಾಳೆ” .ನಿರಾಯುಧ ಹುಡುಗಿಯ ಮೂಲಕ ಧೈರ್ಯ ಮತ್ತು ಭರವಸೆಯ ಕಿರಣ ಹರಡಿಕೊಳ್ಳುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

‘ಬೆಂಗಳೂರಿನ 22 ವರ್ಷದ ಕಾಲೇಜು ವಿದ್ಯಾರ್ಥಿನಿ ಹಾಗೂ ಹವಾಮಾನ ಹೋರಾಟಗಾರ್ತಿ ದಿಶಾ ರವಿಯಿಂದ ದೇಶಕ್ಕೆ ಅಪಾಯ ಎದುರಾಗುತ್ತಿದೆ ಎಂದಾದರೆ ದೇಶದ ಅಡಿಪಾಯ ಅಸ್ಥಿರವಾಗಿದೆ ಎಂದರ್ಥ’ ಎಂದು ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News