ಫೆ.18ರಂದು ಮಿತ್ತೂರಿನಲ್ಲಿ ಅಜ್ಮೀರ್ ಮೌಲಿದ್ ಮತ್ತು ಏರ್ವಾಡಿ ಶುಹದಾ ನೇರ್ಚೆ
Update: 2021-02-15 22:52 IST
ಮಾಣಿ: ದಾರುಲ್ ಇರ್ಶಾದ್ ಎಜ್ಯುಕೇಶನಲ್ ಸೆಂಟರ್ ಮಾಣಿ ಇದರ ಅಧೀನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಬೃಹತ್ ಅಜ್ಮೀರ್ ಮೌಲಿದ್, ಏರ್ವಾಡಿ ಶುಹದಾ ನೇರ್ಚೆ ಮತ್ತು ಖತಮುಲ್ ಕುರ್‌ಆನ್ ಕಾರ್ಯಕ್ರಮವು ಫೆ.18 ಗುರುವಾರ ಮಿತ್ತೂರಿನಲ್ಲಿರುವ ಕೆಜಿಎನ್ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನದ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಬದ್ರುಸ್ಸಾದಾತ್ ಕಡಲುಂಡಿ ತಂಙಳ್, ಖಾಝಿ ಕೂರತ್ ತಂಙಳ್, ಸ್ವಲಾಹುದ್ದೀನ್ ತಂಙಳ್ ಪೆರುಮುಗಂ, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಸಹಿತ ಹಲವಾರು ಉಲಮಾ ಉಮರಾ ನೇತಾರರು, ಸಾಮಾಜಿಕ ರಾಜಕೀಯ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.