×
Ad

ಸ್ಫೋಟಕ ತುಂಬಿದ ಡ್ರೋನ್‌ಗಳನ್ನು ತಡೆದ ಸೌದಿ ನೇತೃತ್ವದ ಮಿತ್ರಪಡೆ

Update: 2021-02-15 23:07 IST
photo: twitter 

ರಿಯಾದ್ (ಸೌದಿ ಅರೇಬಿಯ), ಫೆ. 15: ಯೆಮನ್‌ನ ಹೌದಿ ಬಂಡುಕೋರರು ಸೌದಿ ಅರೇಬಿಯದತ್ತ ಉಡಾಯಿಸಿದರೆನ್ನಲಾದ ಸ್ಫೋಟಕ ತುಂಬಿದ ಎರಡು ಡ್ರೋನ್‌ಗಳನ್ನು ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆ ರವಿವಾರ ತಡೆದು ನಾಶಗೊಳಿಸಿದೆ ಎಂದು ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ವರದಿ ಮಾಡಿದೆ.

  ‘‘ಸೌದಿ ಅರೇಬಿಯದ ನಾಗರಿಕರು ಮತ್ತು ನಾಗರಿಕ ಸಂಸ್ಥಾಪನೆಗಳನ್ನು ಗುರಿಯಾಗಿಸಿ ಹೌದಿ ಬಂಡುಕೋರರು ಉಡಾಯಿಸಿರುವ ಸ್ಫೋಟಕ ತುಂಬಿದ ಎರಡು ಡ್ರೋನ್‌ಗಳನ್ನು ಮಿತ್ರಪಡೆ ತಡೆದು ನಾಶಗೊಳಿಸಿದೆ’’ ಎಂದು ಎಸ್‌ಪಿಎಗೆ ನೀಡಿದ ಹೇಳಿಕೆಯೊಂದರಲ್ಲಿ ಮಿತ್ರಪಡೆಯ ವಕ್ತಾರ ಬ್ರಿಗೇಡಿಯರ್ ಜನರಲ್ ತುರ್ಕಿ ಅಲ್ ಮಾಲ್ಕಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News