ಭಾರತದಿಂದ ಮೆಕ್ಸಿಕೊ ತಲುಪಿದ 8.7 ಲಕ್ಷ ಡೋಸ್ ಕೊರೋನ ಲಸಿಕೆ

Update: 2021-02-15 18:03 GMT

ಮೆಕ್ಸಿಕೊ ಸಿಟಿ, ಫೆ. 15: ಆ್ಯಸ್ಟ್ರಝೆನೆಕ ಕೋವಿಡ್-19 ಲಸಿಕೆಯ 8.70 ಲಕ್ಷ ಡೋಸ್‌ಗಳನ್ನು ಒಳಗೊಂಡ ಸರಕು ಭಾರತದಿಂದ ಹೊರಟು ರವಿವಾರ ಮೆಕ್ಸಿಕೊ ತಲುಪಿದೆ ಎಂದು ಮೆಕ್ಸಿಕೊ ಸರಕಾರ ತಿಳಿಸಿದೆ.

ಅದೂ ಅಲ್ಲದೆ, ಫೈಝರ್-ಬಯೋಎನ್‌ಟೆಕ್ ಲಸಿಕೆಯ 4,94,000 ಡೋಸ್‌ಗಳು ಮೆಕ್ಸಿಕೊವನ್ನು ಮಂಗಳವಾರ ತಲುಪಲಿದೆ ಎಂದು ದೇಶದ ವಿದೇಶ ಸಚಿವ ಮಾರ್ಸಿಲೊ ಎಬ್ರಾರ್ಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರವಿವಾರ ಮೆಕ್ಸಿಕೊವನ್ನು ತಲುಪಿದ ಸರಕು, ಭಾರತದಿಂದ ಮೆಕ್ಸಿಕೊ ಆಮದು ಮಾಡಿಕೊಳ್ಳುವ ಆ್ಯಸ್ಟ್ರಝೆನೆಕ ಕೋವಿಡ್-19 ಲಸಿಕೆಯ ಒಟ್ಟು 20 ಲಕ್ಷ ಡೋಸ್‌ಗಳ ಸುಮಾರು 42 ಶೇಕಡದಷ್ಟಾಗಿದೆ.

ಲ್ಯಾಟಿನ್ ಅಮೆರಿಕದಲ್ಲಿ ವಿತರಣೆಗಾಗಿ ಆ್ಯಸ್ಟ್ರಝೆನೆಕ ಲಸಿಕೆಯನ್ನು ಸ್ಥಳೀಯವಾಗಿ ಉತ್ಪಾದಿಸುವುದಕ್ಕಾಗಿ ಮೆಕ್ಸಿಕೊ ಮತ್ತು ಅರ್ಜೆಂಟೀನ ಆ್ಯಸ್ಟ್ರಝೆನೆಕದೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News