ಪಡುಬಿದ್ರಿ ಗ್ರಾ.ಪಂ.: ಅಧ್ಯಕ್ಷರಾಗಿ ರವಿ ಶೆಟ್ಟಿ ಪದ್ರ, ಉಪಾಧ್ಯಕ್ಷರಾಗಿ ಯಶೋಧಾ ಆಯ್ಕೆ

Update: 2021-02-15 18:25 GMT

ಪಡುಬಿದ್ರಿ: ತೀವ್ರ ಕುತೂಹಲ ಕೆರಳಿಸಿದ್ದ ಪಡುಬಿದ್ರಿ ಗ್ರಾಮ ಪಂಚಾಯಿತಿಯ ಮುಂದಿನ 30 ತಿಂಗಳ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಹಿರಿಯ ಸದಸ್ಯ ರವಿ ಶೆಟ್ಟಿ ಪದ್ರ, ಉಪಾಧ್ಯಕ್ಷೆಯಾಗಿ ಪಕ್ಷೇತರರಾಗಿ ಸ್ಪರ್ಧಿಸಿ ಮೊದಲ ಭಾರಿಗೆ ಸದಸ್ಯರಾಗಿ ಚುನಾಯಿತರಾದ ಯಶೋಧಾ ಆಯ್ಕೆಯಾಗಿದ್ದಾರೆ.

ಪಾದೆಬೆಟ್ಟು ಮತ್ತು ನಡ್ಸಾಲು ಗ್ರಾಮಗಳನ್ನೊಳಗೊಂಡಿರುವ 34 ಸದಸ್ಯ ಬಲದ ಪಡುಬಿದ್ರಿ ಗ್ರಾಮ ಪಂಚಾಯಿತಿನಲ್ಲಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ನಿಗದಿಯಾಗಿತ್ತು. 

ಬಿಜೆಪಿ ಬೆಂಬಲಿತರು ಅಧ್ಯಕ್ಷ ಸ್ಥಾನಕ್ಕೆ ರವಿ ಶೆಟ್ಟಿ ಪಾದೆಬೆಟ್ಟು, ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರರಾಗಿ ಆಯ್ಕೆಯಾಗಿದ್ದ ಯಶೋಧಾ ಹಾಗೂ ಕಾಂಗ್ರೆಸ್ ಬೆಂಬಲಿಗರಲ್ಲಿ ಅಧ್ಯಕ್ಷ ಸ್ಥಾನಕ್ಕೆ ನವೀನ್ ಎನ್. ಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಯನಾ ಅವರು ನಾಮಪತ್ರ ಸಲ್ಲಿಸಿದ್ದರು. 

ಮತದಾನದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ರವಿ ಶೆಟ್ಟಿ ಹಾಗೂ ಯಶೋಧಾ ಅವರಿಗೆ 21 ಮತಗಳು ಪಡೆದಿದ್ದು, ನವೀನ್ ಎನ್. ಶೆಟ್ಟಿ ಹಾಗೂ ನಯನಾ ಅವರಿಗೆ 13 ಮತಗಳಿಸಿದ್ದಾರೆ. 

ಬಿಜೆಪಿ ಬೆಂಬಲಿತರು 16 ಹಾಗೂ 12 ಕಾಂಗ್ರೆಸ್ ಬೆಂಬಲಿತರು ಚುನಾಯಿತರಾಗಿದ್ದು,  4 ಮಂದಿ ಪಕ್ಷೇತರರು ಹಾಗೂ 2 ಎಸ್‍ಡಿಪಿಐ ಬೆಂಬಲಿತ ಸದಸ್ಯರಿದ್ದರು. ಕಳೆದ ವಾರ  ಶನಿವಾರ ಶಾಸಕ ಲಾಲಾಜಿ ಆರ್. ಮೆಂಡನ್ ನೇತೃತ್ವದಲ್ಲಿ ನಡೆದ ಬಿಜೆಪಿ ಬೆಂಬಲಿತರ ಸಭೆಯಲ್ಲಿ ನಾಲ್ಕು ಮಂದಿ ಪಕ್ಷೇತರರು ಬಿಜೆಪಿ ಸೇರ್ಪಡೆಗೊಂಡಿದ್ದು, ಈ ಮಧ್ಯೆ ಬಿಜೆಪಿ ಬೆಂಬಲಿತರ ಸ್ಥಾನ 20ಕ್ಕೆ ಏರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News