×
Ad

ಕೇಂದ್ರ ಸರಕಾರ ಹೊಸ ಪ್ರಸ್ತಾವ ಮುಂದಿಟ್ಟರೆ ಮಾತುಕತೆಗೆ ಸಿದ್ಧ: ರೈತ ಮುಖಂಡರು

Update: 2021-02-16 13:37 IST

ಹೊಸದಿಲ್ಲಿ: ಜನವರಿ 26ರ ಹಿಂಸಾಚಾರ ಘಟನೆ ಹಾಗೂ ಆ ನಂತರ ನಡೆದಿರುವ ಬಂಧನದಿಂದಾಗಿ ಕೇಂದ್ರ  ಹಾಗೂ ರೈತ  ನಾಯಕರುಗಳ ನಡುವಿನ ಮಾತುಕತೆ ನಿಂತುಹೋಗಿತ್ತು. ಜನವರಿ 22ರ ನಂತರ ಎರಡೂ ಕಡೆಯವರು ಸಭೆ ನಡೆಸಿಲ್ಲ. 11ನೇ ಸುತ್ತಿನ ಮಾತುಕತೆಯೂ ವಿಫಲವಾಗಿತ್ತು.   ಸರಕಾರಿ ಅಧಿಕಾರಿಗಳು ಹಾಗೂ ರೈತರ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ತನ್ನ ವರದಿ ಸಲ್ಲಿಸುವ ತನಕ ಒಂದೂವರೆ ವರ್ಷ ಕೃಷಿ ಕಾನೂನುಗಳ ಜಾರಿಗೆ ತಡೆ ನೀಡುವುದಾಗಿ ಸರಕಾರ ಪ್ರಸ್ತಾವ ಮುಂದಿಟ್ಟಿತ್ತು.ಈ ಸಭೆಯಲ್ಲಿ ರೈತ ನಾಯಕರು ಸರಕಾರ ಮುಂದಿಟ್ಟಿದ್ದ ಹೊಸ ಪ್ರಸ್ತಾವವನ್ನು ತಿರಸ್ಕರಿಸಿದ್ದರು. 

ಸರಕಾರ ಹೊಸ ಪ್ರಸ್ತಾವನೆಯನ್ನು ಸಿದ್ಧಪಡಿಸಿದ ನಂತರ ಮುಂದಿನ ಸುತ್ತಿನ ಮಾತುಕತೆಗೆ ಸಿದ್ಧವಾಗುವುದಾಗಿ ರೈತ ಮುಖಂಡರು ಹೇಳಿದ್ದಾರೆ.

“ನಮ್ಮ ಕೊನೆಯ ಸುತ್ತಿನ ಮಾತುಕತೆಯಲ್ಲಿ ಸರಕಾರಿ ಪ್ರತಿನಿಧಿಗಳು ಅಚಲ ಮನೋಭಾವ ಹೊಂದಿದ್ದರು. ನಾವು ಅವರ ಪ್ರಸ್ತಾಪವನ್ನು ಸ್ವೀಕರಿಸದ ಹೊರತು ಎಂ ಎಸ್ಪಿ ಪ್ರಶ್ನೆಯನ್ನು ಚರ್ಚಿಸಲು ಸಿದ್ಧರಿರಲಿಲ್ಲ. ಆದರೆ ಅದು ನಮಗೆ ಸ್ವೀಕಾರಾರ್ಹವಲ್ಲ ಹಾಗೂ ಎಂದಿಗೂ ಅದನ್ನು ನಾವು ಒಪ್ಪುವುದಿಲ್ಲ. ಸರಕಾರ ಬೇರೆ  ಪ್ರಸ್ತಾವ ರೂಪಿಸಿ ನಮಗೆ ಅಧಿಕೃತ ಆಹ್ವಾನವನ್ನು ಕಳುಹಿಸಿದರೆ ನಾವು ಮರುದಿನವೇ ಆ ಕುರಿತು ಚರ್ಚಿಸಲು ಹೋಗುತ್ತೇವೆ'' ಎಂದು ಬಿಕೆಯು ಎಕ್ತಾ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ಹೇಳಿದ್ದಾರೆ.

ರೈತ ಮುಖಂಡರು ಹಾಗೂ ಪ್ರತಿಭಟನಾಕಾರರ ವಿರುದ್ಧ ಪ್ರಕರಣವು ಮುಂದಿನ ಮಾತುಕತೆ ಮುಂದುವರಿಸಲು ಅಡ್ಡಿಯಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅಖಿಲ ಭಾರತ ಕಿಸಾನ್ ಒಕ್ಕೂಟದ ಅಧ್ಯಕ್ಷ ಪ್ರೇಮ್ ಸಿಂಗ್ ಭಂಗು, “ಪ್ರಕರಣವನ್ನು ಹಿಂಪಡೆಯುವುದು ನಮ್ಮ ಮಾತುಕತೆಗೆ ಪೂರ್ವ ಷರತ್ತು ಅಲ್ಲ. ಆದರೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಷರತ್ತು ಇರುತ್ತದೆ. ನಾವು ಯಾವುದೇ ಬಿಕ್ಕಟ್ಟಿನ ಪರವಾಗಿಲ್ಲ'' ಎಂದರು.

 "ನಾವು ಎಫ್ ಐಆರ್ ಹಾಗೂ ನೋಟಿಸ್ ಗಳ ಬಗ್ಗೆ ಚಿಂತಿಸುತ್ತಿಲ್ಲ. ಏಕೆಂದರೆ ಈ ಪ್ರಮಾಣದ ಆಂದೋಲನದಲ್ಲಿ ಇದೆಲ್ಲ ಸಾಮಾನ್ಯ'' ಎಂದು ಲೋಕ ಭಲಾಯಿ ಇನ್ಸಾಫ್ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಬಲದೇವ್ ಸಿಂಗ್ ಸಿರ್ಸಾ ಹೇಳಿದ್ದಾರೆ.

"ನಾವು ಮತ್ತೊಮ್ಮೆ ಮಾತುಕತೆಗೆ ಹೋಗುತ್ತೇವೆ. ಎಲ್ಲವನ್ನು ನಿರ್ವಹಿಸಿದ ನಂತರ ಪ್ರಕರಣವನ್ನು ಹಿಂತೆಗೆದುಕೊಳ್ಳುವುದು ನಮ್ಮ ಕೊನೆಯ ಬೇಡಿಕೆಯಾಗಿದೆ'' ಎಂದು ಜಗಮೋಹನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News