ಫೆ.17: ಉಳ್ಳಾಲದಲ್ಲಿ ಪಿಎಫ್ ಐಯಿಂದ ಯುನಿಟಿ ಮಾರ್ಚ್, ಸಾರ್ವಜನಿಕ ಸಭೆ
Update: 2021-02-16 15:37 IST
ಉಳ್ಳಾಲ, ಫೆ.16: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ‘ದೇಶಕ್ಕಾಗಿ ಪಾಪ್ಯುಲರ್ ಫ್ರಂಟ್ ಜೊತೆಗೆ’ ಘೋಷಣೆಯಡಿ ಫೆ.17ರಂದು ಉಳ್ಳಾಲದಲ್ಲಿ ಯುನಿಟಿ ಮಾರ್ಚ್ ಹಾಗೂ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ.
ಅಪರಾಹ್ನ 2 ಗಂಟೆಗೆ ಯುನಿಟಿ ಮಾರ್ಚ್ ಪ್ರಾರಂಭವಾಗಲಿದ್ದು, ಒಂಭತ್ತುಕೆರೆಯ ಅನಿಲ ಕಾಂಪೌಂಡ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕೇರಳದ ಅಫ್ಸಲ್ ಖಾಸಿಮಿ ಕೊಲ್ಲಂ, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಉಡುಪಿ ಜಿಲ್ಲಾ ಕ್ರೈಸ್ತ ಧರ್ಮಗುರುಗಳಾದ ರೆ.ಫಾ.ವಿಲಿಯಂ ಮಾರ್ಟಿಸ್, ಎಸ್ಡಿ ಪಿಐ ರಾಜ್ಯ ಸಮಿತಿಯ ಸದಸ್ಯರ ಆನಂದ ಮಿತ್ತಬೈಲು ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.