×
Ad

ಮೆಸ್ಕಾಂ ಬಿಲ್ ಅಂಚೆಕಚೇರಿಗಳಲ್ಲಿ ಪಾವತಿಗೆ ವ್ಯವಸ್ಥೆ

Update: 2021-02-16 17:33 IST

ಮಂಗಳೂರು, ಫೆ. 16: ರಾಜ್ಯದಲ್ಲೇ ಮೊದಲ ಬಾರಿಗೆ ಪೋಸ್ಟ್ ಮಾಸ್ಟರ್ ಜನರಲ್ ದಕ್ಷಿಣ ಕರ್ನಾಟಕ ವಲಯ ಮತ್ತು ಮೆಸ್ಕಾಂ ಜತೆ ನಡೆದ ಒಡಂಬಡಿಕೆಯಂತೆ ದ.ಕ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅಂಚೆ ಕಚೇರಿ ಮೂಲಕ ಆನ್‌ಲೈನ್‌ನಡಿ ಮೆಸ್ಕಾಂ ಬಿಲ್ ಪಾತಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.

ಈವರೆಗೂ ಮೆಸ್ಕಾಂ ಬಿಲ್‌ಗಳನ್ನು ಮಂಗಳೂರು, ಪುತ್ತೂರು, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಂಗಳೂರಿನ ಅಂಚೆ ಕಚೇರಿಗಳಲ್ಲಿ ಆಫ್‌ಲೈನ್ ಮೂಲಕ ಆರ್‌ಆರ್‌ಸಂಖ್ಯೆ ಹಾಗೂ ಮೆಸ್ಕಾಂ ಸಬ್ ಡಿವಿಜನ್ ಕೋಡ್ ಆಧಾರಲ್ಲಿ ಸ್ವೀಕರಿಸಲಾಗುತ್ತಿತ್ತು. ಈ ಕಾರ್ಯ ವಿಧಾನದಲ್ಲಿ ಎಲ್ಲಾ ಅಂಚೆ ಕಚೇರಿಗಳಲ್ಲಿ ಬುಕ್ ಮಾಡಲಾದ ಮೆಸ್ಕಾಂ ಬಿಲ್‌ಗಳ ವಿವರಗಳನ್ನು ಅಂಚೆ ಇಲಾಖೆಯು ಮರುದಿನ ಮೆಸ್ಕಾಂ ಇಲಾಖೆಗೆ ನೀಡುತ್ತಿತ್ತು. ಇದರಿಂದಾಗಿ ಮೆಸ್ಕಾಂ ಬಿಲ್ಲುಗಳ ಮೊತ್ತವನ್ನು ಗ್ರಾಹಕರ ಮೀಟರ್ ಸಂಖ್ಯೆಗೆ ಹೊಂದಿಸಲು ಒಂದು ದಿನ ವಿಳಂಬವಾಗುತ್ತಿತ್ತು. ಬಿಲ್‌ನಲ್ಲಿ ನಮೂದಾಗಿರುವ ಆರ್‌ಆರ್‌ಸಂಖ್ಯೆ ಅಥವಾ ಮೆಸ್ಕಾಂ ಸಬ್ ಡಿವಿಜನ್ ಕೋಡ್ ಮಾಸಿ ಹೋಗಿದ್ದಲ್ಲಿ ತಪ್ಪಾದ ಆರ್‌ಆರ್ ಸಂಖ್ಯೆ ಅಥವಾ ತಪ್ಪಾಂದ ಮೆಸ್ಕಾಂ ಸಬ್ ಡಿವಿಜನ್‌ಗೆ ಪಾವತಿಯಾಗುವ ಸಾಧ್ಯತೆ ಇತ್ತು. ಈ ಪ್ರಕ್ರಿಯೆಯಲ್ಲಿ ಇರುವ ನ್ಯೂನ್ಯತೆಗಳನ್ನು ಹೋಗಲಾಗಿಸಲು ಮಂಗಳೂರು ಅಂಚೆ ವಿಭಾಗ ಮುಂದಾಗಿದೆ. ಇನ್ನು ಮುಂದೆ ಎಲ್ಲಾ ಇಲಾಖಾ ಅಂಚೆ ಕಚೇರಿಗಳಲ್ಲಿ ಸ್ವೀಕರಿಸಲಾಗುವ ವಿದ್ಯುತ್ ಬಿಲ್‌ಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲಾಗುವುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News