17ರಂದು ಹೆಜಮಾಡಿ ಟೋಲ್ ವಿರುದ್ಧ ಪ್ರತಿಭಟನೆ
Update: 2021-02-16 21:24 IST
ಉಡುಪಿ: ಸ್ಥಳೀಯರಿಗೆ ಟೋಲ್ ವಿನಾಯಿತಿ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಟೋಲ್ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಮತ್ತು ಸ್ಥಳೀಯರಿಗೆ ಟೋಲ್ ವಿನಾಯಿತಿ ರದ್ದುಗೊಳಿಸಿರುವುದರ ವಿರುದ್ಧ ಹೆಜಮಾಡಿ ನಾಗರಿಕರ ಹಿತರಕ್ಷಣಾ ಸಮಿತಿಯ ಹೋರಾಟಕ್ಕೆ ನಿರ್ಧರಿಸಿದೆ.
ಈ ಸಂಬಂಧ ಸಮಿತಿಯ ಅಧ್ಯಕ್ಷ ಶೇಖರ್ ಹೆಜ್ಮಾಡಿ, ಕಾರ್ಯದರ್ಶಿ ಸನಾ ಇಬ್ರಾಹಿಂ, ಸದಸ್ಯರಾದ ಶೇಖಬ್ಬ ಕೋಟೆ, ರೋಲಿ ಡಿಕೋಸ್ತಾ, ಸುೀರ್ ಕರ್ಕೇರಮೊದಲಾದವರು ಟೋಲ್ ವ್ಯವಸ್ಥಾಪಕ ಶಿವಪ್ರಸಾದ್ ಶೆಟ್ಟಿ ಜೊತೆ ಮಾತುಕತೆ ನಡೆಸಿದರು.
ಅಧಿಕಾರಿಗಳಿಗೆ ಸರಿಯಾದ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮತ್ತು ಆಸುಪಾಸಿನ ಗ್ರಾಮಗಳ ವಾಹನಗಳಿಗೆ 6 ಕಿಮೀ. ವ್ಯಾಪಿಪ್ತಿಗೆ ಟೋಲ್ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ ಸಮಿತಿಯ ನೇತೃತ್ವದಲ್ಲಿ ಪಡುಬಿದ್ರಿ, ಹೆಜಮಾಡಿ, ಮೂಲ್ಕಿ ಭಾಗದ ಸ್ಥಳೀಯರು ಫೆ.17ರಂದು ಬೆಳಿಗ್ಗೆ 9 ಗಂಟೆಯಿಂದ ಟೋಲ್ಗೇಟ್ ಬಳಿ ಪ್ರತಿಟನೆ ನಡೆಸಲಿದ್ದಾರೆ.