×
Ad

​ದಿಶಾ ರವಿ ಬಂಧನ ವಿರೋಧಿಸಿ ಡಿವೈಎಫ್‌ಐ ಪ್ರತಿಭಟನೆ

Update: 2021-02-16 21:26 IST

ಕುಂದಾಪುರ, ಫೆ.16: ರೈತ ಹೋರಾಟ ಬೆಂಬಲಿಸಿ ಟೂಲ್ ಕಿಟ್ ಬಳಸಿ ರುವುದು ದೇಶದ್ರೋಹ ಎಂದು ಆರೋಪಿಸಿ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವುದನ್ನು ವಿರೋಧಿಸಿ ಡಿವೈಎಫ್ಐ ಇಂದು ಕುಂದಾಪುರದ ಶಾಸ್ತ್ರಿವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಅಧ್ಯಕ್ಷ ರಾಜೇಶ್ ವಡೇರಹೋಬಳಿ, ಸರಕಾರ ದೆಹಲಿ ಪೋಲಿಸರನ್ನು ತನ್ನ ರಾಜಕೀಯ ಹಿತಾಸಕ್ತಿ ಗಾಗಿ ಬಳಸಿಕೊಳ್ಳುತ್ತಿದೆ. ಇದರಿಂದ ಜನರಲ್ಲಿರುವ ಸಂವಿಧಾನದ ಮೇಲಿನ ನಂಬಿಕೆ ದುರ್ಬಲಗೊಳಸಲು ಪ್ರಯತ್ನಿಸುತ್ತಿದೆ ಎಂದರು.

ಡಿವೈಎಫ್‌ಐ ತಾಲೂಕು ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ, ದೇಶದ ಇತಿಹಾಸದಲ್ಲಿ ಬ್ರಿಟೀಷರ ಆಳ್ವಿಕೆಯ ನಂತರ ಬಿಜೆಪಿ ಸರಕಾರ ಅತೀ ಕೆಟ್ಟ ಸರಕಾರವಾಗಿದೆ. ಹೋರಾಟಗಾರರ ಮೇಲೆ ಅತೀ ಹೆಚ್ಚು ದೇಶದ್ರೋಹ ಗಳನ್ನು ದಾಖಲಿಸಿದೆ. ಬಿಜೆಪಿ ಸರಕಾರ ಜನಪರ ಹೋರಾಟಗಳನ್ನು ದಾರಿ ತಪ್ಪಿಸಲು ವಿದೇಶಿ ಪದ ಯಥೇಚ್ಛವಾಗಿ ಬಳಸಿ ಜನರ ನಿಜವಾದ ಸಮಸ್ಯೆಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಡಿವೈಎಫ್‌ಐ ಮಾಜಿ ಮುಖಂಡ ಎಚ್.ನರಸಿಂಹ ಮಾತನಾಡಿದರು. ಈ ಸಂದರ್ಭದಲ್ಲಿ ಡಿವೈಎಫ್‌ಐ ಮುಖಂಡರಾದ ರವಿವಿ ಎಂ., ರಾಜ ಬಿ.ಟಿ.ಆರ್., ಬಾಲಕೃಷ್ಣ ಕೆ.ಎಂ., ಗಣೇಶ ಕಲ್ಲಾಗರ, ಉದಯ ಟೈಲರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News