ಅಂಗಡಿಗೆ ಕಾರು ಢಿಕ್ಕಿ: ಲಕ್ಷಾಂತರ ರೂ. ಮೌಲ್ಯದ ಸೊತ್ತು ಹಾನಿ
Update: 2021-02-16 22:21 IST
ಉಡುಪಿ, ಫೆ.16: ಕಾರೊಂದು ರಸ್ತೆ ಬದಿಯ ಅಂಗಡಿಯೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿಯಾಗಿರುವ ಘಟನೆ ಅಜ್ಜರಕಾಡು ಎಲ್.ಬಿ.ಎಸ್. ಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ನಗರದ ಸಿಂಡಿಕೇಟ್ ಸರ್ಕಲ್ನಿಂದ ಬ್ರಹ್ಮಗಿರಿ ಜಂಕ್ಷನ್ ಕಡೆಗೆ ಹೋಗುತ್ತಿದ್ದ ಖತೀಬ್ ಜುಹೈಫ್ ಎಂಬವರ ಕಾರು, ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುನಿಲ್ ರೊಬೆನ್ ಡಿಸೋಜ ಎಂಬವರ ನೆಟ್‌ಹಟ್ ಟೆಕ್ನಾಲಜಿಸ್ ಎಂಬ ಅಂಗಡಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಅಂಗಡಿ ಮತ್ತು ಅಂಗಡಿ ಒಳಗಿದ್ದ ಕಂಪ್ಯೂಟರ್ ಹಾಗೂ ಇತರ ಉಪಕರಣಗಳು ಸಂಪೂರ್ಣ ಜಖಂ ಗೊಂಡು 5,00,000ರೂ. ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.