×
Ad

​ಮಣಿಪಾಲ: ವಿಶೇಷ ಮಕ್ಕಳ ‘ಆಸರೆ’ ಸಂಸ್ಥೆಗೆ ರಾಜ್ಯ ಪ್ರಶಸ್ತಿ

Update: 2021-02-16 22:41 IST

ಮಣಿಪಾಲ, ಫೆ.16: ಮಣಿಪಾಲ ಮಾಹೆ ವಿವಿ ಹಾಗೂ ಅರ್ಚನಾ ಟ್ರಸ್ಟ್‌ನ ಜಂಟಿ ಯೋಜನೆಯಾದ ಮಣಿಪಾಲ ‘ಆಸರೆ’ ವಿಶೇಷ ಮಕ್ಕಳ ಸಂಸ್ಥೆಯ ಅಸಾಧಾರಣ ಸಾಧನೆಗಾಗಿ ರಾಜ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಚಿಕ್ಕಪೇಟೆಯ ಶಾಸಕ ಡಾ.ಉದಯ ಬಿ.ಗರುಡಾಚಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಆಸರೆ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಜೈವಿಠಲ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಿದರು.

ಆಸರೆಯ ಅಂತಾರಾಷ್ಟ್ರೀಯ ಈಜು ಚಾಂಪಿಯನ್ ಅರ್ಚನಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಸಚಿವರಾದ ಎಸ್.ಟಿ.ಸೋಮಶೇಖರ್, ಆರ್.ಅಶೋಕ್, ಇಲಾಖೆಯ ನಿರ್ದೇಶಕ ಡಾ.ವಿ.ಮುನಿರಾಜು ಉಪಸ್ಥಿತರಿದ್ದರು.

ಆಸರೆ ಸಂಸ್ಥೆಯ ಈ ಸಾಧನೆಗೆ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತ ರಾಮದಾಸ ಪೈ, ಬೆಂಗಳೂರು ಎಂಇಎಂಜಿ ಅಧ್ಯಕ್ಷ ಡಾ.ರಂಜನ್ ಪೈ, ಮಾಹೆಯ ಪ್ರೊ ಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್, ಮಾಹೆಯ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಹರ್ಷ ವ್ಯಕ್ತಪಡಿಸಿದ್ದು ಸಂಸ್ಥೆಯನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News