ರಾಮದೇವ್ ವ್ಯಂಗ್ಯ ಚಿತ್ರ ಟ್ವೀಟಿಸಿ ಇಂಧನ ದರ ಏರಿಕೆಗೆ ಕೇಂದ್ರವನ್ನು ಕುಟುಕಿದ ತರೂರ್

Update: 2021-02-16 17:32 GMT

ಹೊಸದಿಲ್ಲಿ: ಯೋಗ ಗುರು  ರಾಮದೇವ್ ಅವರ ವ್ಯಂಗ್ಯಚಿತ್ರವನ್ನು ಮಂಗಳವಾರ ಟ್ವೀಟಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಏರುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕುರಿತಂತೆ ಕೇಂದ್ರ ಸರಕಾರವನ್ನು ಕುಟುಕಿದ್ದಾರೆ.

 ಇಂಧನ ಕೇಂದ್ರದಲ್ಲಿ ರಾಮದೇವ್ ತಲೆ ಕೆಳಗಾಗಿ ಯೋಗ ಮಾಡುತ್ತಿರುವುದು, ಲೀಟರ್ ಗೆ 90 ರೂ. ಫಲಕವನ್ನು ಹಾಕಿರುವ ವ್ಯಂಗ್ಯ ಚಿತ್ರವನ್ನು ತರೂರ್ ಹಂಚಿಕೊಂಡಿದ್ದಾರೆ. ಮಲಯಾಳಂನಲ್ಲಿ ಚಿತ್ರ ವಿವರ ನೀಡಲಾಗಿದೆ.

ಅದನ್ನು ಇಂಗ್ಲೀಷ್ ಗೆ ಅನುವಾದಿಸಿ ಟ್ವೀಟಿಸಿರುವ ತಿರುವನಂತಪುರ ಸಂಸದ ತರೂರ್,  "ನೀವು ರಾಮದೇವ್ ಅವರಿಂದ ಯೋಗ ಪಾಠಗಳನ್ನು ಕಲಿತುಕೊಂಡರೆ, ನೀವು ಕೂಡ ಪೆಟ್ರೋಲ್ ದರವನ್ನು ಲೀಟರ್ ಗೆ 06 ರೂಪಾಯಿ ಆಗಿರುವುದನ್ನುನೋಡಬಹುದು! ಎಂದು ಬರೆದಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಲ್ಲ ಮೆಟ್ರೋ ನಗರಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಸತತ 8ನೇ ದಿನವಾದ ಮಂಗಳವಾರ ತೈಲ ಕಂಪೆನಿಗಳು ಲೀಟರ್ ಗೆ 30 ಪೈಸೆ ಹೆಚ್ಚಳ ಮಾಡಿವೆ.

ಮಧ್ಯಪ್ರದೇಶದ ಭೋಪಾಲ್ ನಲ್ಲಿ  ಫೆ.14 ರಂದು ಪ್ರೀಮಿಯಮ್ ಪೆಟ್ರೋಲ್ ದರ  ಪ್ರತಿ ಲೀಟರ್ ಗೆ 100 ರೂ. ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News