ಹೆಜಮಾಡಿ ಗ್ರಾಪಂ : ಅಧ್ಯಕ್ಷ ಪ್ರಾಣೇಶ್, ಉಪಾಧ್ಯಕ್ಷೆ ಪವಿತ್ರಾ

Update: 2021-02-16 17:45 GMT

ಪಡುಬಿದ್ರಿ, ಫೆ.16: ಹೆಜಮಾಡಿ ಗ್ರಾಪಂ ಅಧ್ಯಕ್ಷರಾಗಿ ಪ್ರಾಣೇಶ್ ಹೆಜ್ಮಾಡಿ, ಉಪಾಧ್ಯಕ್ಷೆಯಾಗಿ ಪವಿತ್ರಾ ಗಿರೀಶ್ ಅವಿರೋಧ ಆಯ್ಕೆಯಾಗಿದ್ದಾರೆ.
21 ಸದಸ್ಯ ಬಲದ ಗ್ರಾಪಂನಲ್ಲಿ ಬಿಜೆಪಿ 16, ಕಾಂಗ್ರೆಸ್ 4, ಪಕ್ಷೇತರ ಒಬ್ಬರು ಸದಸ್ಯರಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲು ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆ ಸ್ಥಾನಕ್ಕೆ ಮೀಸಲಾಗಿತ್ತು. ಎರಡೂ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News