ಉಳ್ಳಾಲದಲ್ಲಿ ಪಾಪ್ಯುಲರ್ ಫ್ರಂಟ್ ಡೇ

Update: 2021-02-17 14:19 GMT

ಉಳ್ಳಾಲ : ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಆರೆಸೆಸ್ಸ್ ಸಿದ್ಧಾಂತಕ್ಕೆ ಶರಣಾಗಿದೆ. ಬಿಜೆಪಿ ಸರ್ಕಾರ ನಮ್ಮನ್ನು ಶತ್ರುಗಳ ಸ್ಥಾನದಲ್ಲಿ ನೋಡುತ್ತಿದೆ ಎಂದು ಪಿಎಫ್ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದರು.

ಅವರು ಉಳ್ಳಾಲ ಒಂಬತ್ತುಕೆರೆಯ ಮೈದಾನದಲ್ಲಿ ಪಾಪ್ಯುಲರ್ ಫ್ರಂಟ್ ಡೇ ಅಂಗವಾಗಿ ‘ದೇಶಕ್ಕಾಗಿ ಪಾಪ್ಯುಲರ್ ಫ್ರಂಟ್ ಜೊತೆಗೆ’ ಘೋಷಣೆಯಡಿ ಹಮ್ಮಿಕೊಂಡಿರುವ ಯುನಿಟಿ ಮಾರ್ಚ್ ಹಾಗೂ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪಿಎಫ್ಐ ಯಾವುದರ ಬಾಲಕೋಚಿಯಲ್ಲ, ಆರೆಸೆಸ್ಸ್ ಪಾಠ ಕೂಡಾ ಬೇಕಾಗಿಲ್ಲ. ಸೆಕ್ಯೂಲರ್ ನಾಯಕರು ಎಂದು ನಡೆಯುವವರು ಕೂಡ ಕೆಲವು ಬಾರಿ ದಾರಿ ತಪ್ಪಿ ಮಾತನಾಡುತ್ತಾರೆ. ಆರೆಸೆಸ್ಸ್ ಸಿದ್ಧಾಂತಕ್ಕೆ ಭಾರತದಲ್ಲಿ ದೊಡ್ಡ ಸಂಖ್ಯೆಯ ಹಿಂದೂಗಳೇ ವಿರೋಧಿಗಳಾಗಿದ್ದಾರೆ ಎಂದು ಹೇಳಿದರು.

ಪಿಎಫ್ಐ ಗೆ ದೇಶದ ಮೇಲೆ ಗೌರವ ಇದೆ. ಒಬ್ಬನ ತಲೆಗೆ ದೇಶ ದ್ರೋಹಿ ಹಣೆಪಟ್ಟಿ ಕಟ್ಟುವ ಮೊದಲು ದೇಶದ್ರೋಹಿಗಳು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮೋದಿ, ಅಮಿತ್ ಶಾ ನಡುವೆ ಆಡಳಿತಕ್ಕೆ ಸಂಬಂಧಿಸಿ ಗಲಾಟೆ ನಡೆಯುತ್ತಾ ಇದೆ. ಜನರ ಹಕ್ಕನ್ನು ನೀಡಲು ಇವರಿಂದ ಆಗುವುದಿಲ್ಲ. ಗಲಾಟೆ ಮಾಡುವುದು, ಲಾಠಿ ರುಚಿ ತೋರಿಸುವುದು ಇವರ ಗುರಿಯಾಗಿರುತ್ತದೆ. ಇವರ ಸಿದ್ಧಾಂತಗಳಿಗೆ ಪಿಎಫ್ಐ ಎಂದಿಗೂ ಮಣಿಯುವುದಿಲ್ಲ ಎಂದರು‌.

ಶಾಫಿ ಬೆಳ್ಳಾರೆ ಮಾತನಾಡಿ, ಇದು ಶೋಷಿತ ಸಮುದಾಯಗಳ ದಿನವಾಗಿದೆ. ದೇಶದಲ್ಲಿ ಹಿಂದುತ್ವ, ಫ್ಯಾಶಿಸ್ಟ್ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಜಮಖಂಡಿ ನಲ್ಲಿ ನಡೆಯಬೇಕಾಗಿದ್ದ ಈ ಕಾರ್ಯಕ್ರಮ ನನ್ನು ಫ್ಯಾಶಿಸ್ಟ್ ರು ಭಯ ಭೀತರಾಗಿ ನಡೆಯದಂತೆ ಮಾಡಿದ್ದಾರೆ. ಒಟ್ಟಿನಲ್ಲಿ ದೇಶಕ್ಕೆ ಆರೆಸೆಸ್ಸ್  ಶತ್ರುವಾಗಿದೆ. ಆರೆಸೆಸ್ಸ್ ನಿಂದ ಪಾಠ ಕಲಿತು ಚಳವಳಿ ನಡೆಸಲು ಇರುವ ಸಂಘಟನೆ ಪಿಎಫ್ಐ ಆಗಿದೆ. ಆರೆಸೆಸ್ಸ್ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿ ಯವರೆಗೆ ನ್ಯಾಯ ವನ್ನು ಜನರ ಬಳಿ ತಲುಪಿಸಲು ಆಗುವುದಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಯೋಗಿಯ ರಾಜ್ಯದಲ್ಲಿ ಬಿಜೆಪಿ ಮುಖಂಡ ನಿಂದ ಹೆಣ್ಣು ಮಕ್ಕಳಿಗೆ ದೌರ್ಜನ್ಯ ಆಗಿದೆ ಎಂದು ಅವರು ಹೇಳಿದರು.

ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯರ ಆನಂದ ಮಿತ್ತಬೈಲು ಮಾತನಾಡಿದರು. ಪಿಎಫ್ಐ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಪ್ರಯುಕ್ತ ಮಧ್ಯಾಹ್ನ ಯುನಿಟಿ ಮಾರ್ಚ್ ನಡೆಯಿತು. ಪಿಎಫ್ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಶಾಫಿ ಬೆಳ್ಳಾರೆ, ಅಯ್ಯೂಬ್, ಮಜೀದ್ ತುಂಬೆ, ಅಕ್ರಮ್ ಹಸನ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮ ದ ಪ್ರಯುಕ್ತ ಅಬ್ಬಕ್ಕ ಸರ್ಕಲ್ ನಿಂದು ಯುನಿಟ್ ಮಾರ್ಚ್ ಜಾಥಾ ಹಮ್ಮಿಕೊಂಡಿದ್ದರು. ಸಫ್ವಾನ್ ಕಮಾಂಡ್ ಆಗಿ ಕಾರ್ಯ ನೀರ್ವಹಿಸಿದ್ದರು. ಬ್ಯಾಂಡ್ ಮೂಲಕ ವಿವಿಧ ಘೋಷಣೆ ಗಳೊಂದಿಗೆ ಯೂನಿಟಿ ಮಾರ್ಚ್ ಸಭಾಂಗಣ ವರೆಗೆ ನಡೆಯಿತು.

ಪಿಎಫ್ಐ ಕಾರ್ಯಕರ್ತರು ಯುನಿಟಿ ಮಾರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News