ಬೈಡನ್ ಆಡಳಿತದಿಂದ ಸೌದಿ ಜೊತೆಗಿನ ಸಂಬಂಧ ಮರು ವಿಮರ್ಶೆ

Update: 2021-02-17 14:43 GMT

ವಾಶಿಂಗ್ಟನ್, ಫೆ. 17: ಸೌದಿ ಅರೇಬಿಯದೊಂದಿಗಿನ ಬಾಂಧವ್ಯವನ್ನು ಮರುವಿಮರ್ಶೆಗೊಳಪಡಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಉದ್ದೇಶಿಸಿದ್ದಾರೆ. ಸೌದಿ ಯುವರಾಜ ಹಾಗೂ ದೇಶದ ವಾಸ್ತವಿಕ ಆಡಳಿತಗಾರ ಮುಹಮ್ಮದ್ ಬಿನ್ ಸಲ್ಮಾನ್ ಜೊತೆಗಿನ ನಂಟನ್ನು ಸೀಮಿತಗೊಳಿಸುವುದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ. ಆದರೆ ದೊರೆ ಸಲ್ಮಾನ್ ಜೊತೆಗಿನ ಬಾಂಧವ್ಯವನ್ನು ಅಮೆರಿಕ ಮೊದಲಿನಂತೆಯೇ ಉಳಿಸಿಕೊಳ್ಳಲಿದೆ.

‘‘ಸೌದಿ ಅರೇಬಿಯದೊಂದಿಗಿನ ನಮ್ಮ ಬಾಂಧವ್ಯವನ್ನು ಮರುವಿಮರ್ಶೆಗೊಳಪಡಿಸಲಿದ್ದೇವೆ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ‘‘ಸಮಾನ ಮಟ್ಟದ ಪದಾಧಿಕಾರಿಗಳೊಂದಿಗೆ ವ್ಯವಹರಿಸುವ ಪದ್ಧತಿಗೆ ಹಿಂದಿರುಗುವುದು ಮರುವಿಮರ್ಶೆಯ ಒಂದು ಭಾಗವಾಗಿದೆ. ಅಮೆರಿಕದ ಅಧ್ಯಕ್ಷರ ಮಟ್ಟದ ಸೌದಿ ಪದಾಧಿಕಾರಿ ದೊರೆ ಸಲ್ಮಾನ್ ಆಗಿದ್ದಾರೆ’’ ಎಂದು ಅವರು ತಿಳಿಸಿದರು.

 ಸೌದಿ ಯುವರಾಜ ಅಮೆರಿಕ ಅಧ್ಯಕ್ಷ ಬೈಡನ್‌ಗೆ ಇನ್ನು ಮೂಂದೆ ಅಮೆರಿಕ ಅಧ್ಯಕ್ಷ ಬೈಡನ್ ಜೊತೆ ನೇರವಾಗಿ ವ್ಯವಹರಿಸಲು ಸಾಧ್ಯವಾಗುವುದಿಲ್ಲ. ಅವರು ತನ್ನ ಸಮಾನ ಮಟ್ಟದ ಅಮೆರಿಕದ ಪದಾಧಿಕಾರಿಯಾಗಿರುವ ರಕ್ಷಣಾ ಕಾರ್ಯದಶಿ ಲಾಯ್ಡಾ ಆಸ್ಟಿನ್ ಜೊತೆ ವ್ಯವಹರಿಸಬೇಕಾಗುತ್ತದೆ.

 ಯುವರಾಜ ಸಲ್ಮಾನ್‌ರ ಅಧಿಕೃತ ಹುದ್ದೆ ಉಪ ಪ್ರಧಾನಿ ಹಾಗೂ ರಕ್ಷಣಾ ಸಚಿವ ಅಗಿದ್ದರೂ, ತನ್ನ ತಂದೆಯ ಉತ್ತರಾಧಿಕಾರಿಯಾಗಿ ಹಲವಾರು ಜವಾಬ್ದಾರಿಗಳನ್ನು ಅವರು ನಿಭಾಯಿಸುತ್ತಿದ್ದಾರೆ.

ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೌದಿ ಅರೇಬಿಯವನ್ನು ತನ್ನ ಮಧ್ಯಪ್ರಾಚ್ಯ ತಂತ್ರಗಾರಿಕೆಯ ಕೇಂದ್ರಬಿಂದುವನ್ನಾಗಿ ಮಾಡಿದ್ದರು. ಅವರು ಸಂಪ್ರದಾಯಗಳಿಗೆ ವಿದಾಯ ಹೇಳಿ, ಅಮೆರಿಕದ ಅಧ್ಯಕ್ಷರಾಗಿ ಮೊದಲ ವಿದೇಶ ಪ್ರವಾಸವನ್ನು ಸೌದಿ ಅರೇಬಿಯಕ್ಕೆ ಕೈಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News