ತೆಂಕಪೇಟೆ: ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆ
ಉಡುಪಿ, ಫೆ.17: ತೆಂಕಪೇಟೆ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಫೆ.24ರ ವರೆಗೆ ಹಮ್ಮಿಕೊಳ್ಳಲಾದ 120ನೆ ಭಜನಾ ಸಪ್ತಾಹ ಮಹೋತ್ಸವವನ್ನು ಇಂದು ಕಾಶೀ ಮಠಾಧೀಶ ಶ್ರೀಸಂಯಮಿಂದ್ರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ಏಳು ದಿನಗಳ ಕಾಲ ಅಹೋರಾತ್ರೀ ಊರ ಪರವೂರ ಸಂತ ಮಂಡಳಿ ಗಳಿಂದ ನಿರಂತರ ಹರಿನಾಮ ಸಂಕೀರ್ತನೆ ನೆಡೆಯಲಿದೆ. ದೇವಳದ ಅರ್ಚಕ ರಾದ ರವೀಂದ್ರ ಭಟ್, ವಿನಾಯಕ ಭಟ್, ದಯಾಘಾನ್ ಭಟ್ ಪೂಜಾ ಕಾರ್ಯದಲ್ಲಿ ಸಹಕರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ಆಡಳಿತ ಮಂಡಳಿ ಸದಸ್ಯರಾದ ಮಟ್ಟಾರ್ ವಸಂತ ಕಿಣಿ, ರೋಹಿತಾಕ್ಷ ಪಡಿಯಾರ, ಪುಂಡಲೀಕ ಕಾಮತ್, ಕೈಲಾಶನಾಥ್ ಶೆಣೈ, ದೇವದಾಸ್ ಪೈ, ನಾರಾಯಣ ಪ್ರಭು, ಅಶೋಕ ಬಾಳಿಗಾ, ಉಮೇಶ ಪೈ, ಸುರೇಶ ನಾಯಕ್, ಶಾಂತಾರಾಮ್ ಶಾನಭಾಗ್, ಸತೀಶ ಕಿಣಿ, ಭಾಸ್ಕರ್ ಶೆಣೈ, ಸುಬ್ಬಣ್ಣ ಪೈ ಮೊದಲಾದವರು ಉಪಸ್ಥಿತರಿದ್ದರು.
ಪೇಜಾವರ ಶ್ರೀ ಭೇಟಿ: ಭಜನಾ ಸಪ್ತಾಹ ಮಹೋತ್ಸವದ ಪ್ರಯುಕ್ತ ಉಡುಪಿ ಪೇಜಾವರ ಶ್ರೀ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೇವಳಕ್ಕೆ ಭೇಟಿ ನೀಡಿದರು.
ಕಾಶೀ ಮಠಾಧೀಶ ಶ್ರೀಸಂಯಮಿಂದ್ರ ತೀರ್ಥ ಸ್ವಾಮೀಜಿ, ದೇವಳದ ಧರ್ಮ ದರ್ಶಿ ಪಿ.ವಿ.ಶೆಣೈ, ಉಡುಪಿ ಶಾಸಕ ರಘುಪತಿ ಭಟ್, ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷ ರಾಘುವೇಂದ್ರ ಕಿಣಿ ಮೊದಲಾದವರು ಹಾಜರಿದ್ದರು.