ಫೆ.21ರಂದು ಕೊಕ್ಕರ್ಣೆಯಲ್ಲಿ ವೈದ್ಯಕೀಯ ತಪಾಸಣೆ
ಉಡುಪಿ, ಫೆ.17: ಕೊಕ್ಕರ್ಣೆ ನಿರಂತರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಳ್ತೂರು-ಕೆಂಜೂರು, ಕರ್ಜೆ, ಕೊಕ್ಕರ್ಣೆ, ನಾಲ್ಕೂರು, ಚೇರ್ಕಾಡಿ ಗ್ರಾಪಂಗಳ ಸಹಯೋಗದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆರೋಗ್ಯ ಕ್ಷೇತ್ರದ ಯೋಜನೆಯ ಫಲಾನುಭವಿಗಳಿಗೆ ವೈದ್ಯಕೀಯ ತಪಾಸಣೆ ಮತ್ತು ಸಲಕರಣೆ ವಿತರಣೆ ಫೆ.21ರಂದು ಕೊಕ್ಕರ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 10ಗಂಟೆಗೆ ವೈದ್ಯಕೀಯ ಶಿಬಿರವನ್ನು ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಶಾಸಕ ರಘುಪತಿ ಭಟ್ ಭಾಗವಹಿ ಸಲಿರುವರು ಎಂದು ಟ್ರಸ್ಟ್ ಸ್ಥಾಪಕಾಧ್ಯಕ್ಷ ಕೆ.ನಿರಂಜನ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಅಧಿಕಾರಿಗಳು ಮತ್ತು ಇಎಸ್‌ಐಸಿ ವೈದ್ಯರು ಸರಕಾರದ ಯೋಜನೆಗಳ ಕುರಿತು ಮಾಹಿತಿ ನೀಡಲಿ ದ್ದಾರೆ. ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಬಾಲಕೃಷ್ಣ ಹೆಗ್ಡೆ, ಕಮಲಾಕ್ಷ ಹೆಬ್ಬಾರ್, ಗುರುದತ್ತ ಅಡಿಗ ಉಪಸ್ಥಿತರಿದ್ದರು.