ಸಾಸ್ತಾನ ಟೋಲ್ ವಿರೋಧಿಸಿ ಕೋಟ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಬಂದ್ ಎಚ್ಚರಿಕೆ

Update: 2021-02-17 15:43 GMT

ಕೋಟ, ಫೆ.17: ಸಾಸ್ತಾನ ಟೋಲ್ ಗೇಟಿನ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿ ರುವುದರ ವಿರುದ್ಧ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಇಂದು ಸಾಸ್ತಾನ ಶಿವಕೃಪ ಕಲ್ಯಾಣ ಮಂಟಪದಲ್ಲಿ   ಸಭೆ ನಡೆಸಿತು.

ಸಮಿತಿ ಅಧ್ಯಕ್ಷ ಶಾಮ್ ಸುಂದರ್ ಮಾತನಾಡಿ, ಫೆ.22ರಂದು ಸಾಸ್ತಾನ ಟೋಲ್ನ ಹತ್ತಿರ ಬೃಹತ್ ಪ್ರತಿಭಟನೆ ಮಾಡಲಾಗುವುದು. ಅಲ್ಲದೆ ಕೋಟ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಯಂಪ್ರೇರಿತ ಬಂದ್ ಮಾಡಲಾಗುವುದು ಎಂದು ತಿಳಿಸಿದರು.

ಬಳಿಕ ಸಭೆಯಲ್ಲಿ ಸೇರಿದ ನೂರಾರು ಮಂದಿ, ಶಿವಕೃಪ ಕಲ್ಯಾಣ ಮಂಟಪ ದಿಂದ ಕಾಲ್ನಡಿಗೆಯಲ್ಲಿ ಸಾಸ್ತಾನ ಟೋಲ್ವರೆಗೆ ಮೌನ ಪ್ರತಿಭಟನೆ ನಡೆಸಿದರು. ಅಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ನಂತರ ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ, ನವಯುಗ ಕಂಪನಿ ಸಿಬ್ಬಂದಿ ಜತೆ ಚರ್ಚೆ ಮಾಡಿ, ಮುಂದೆ ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಭೆಯವರೆಗೆ ತನಕ ಯಥಾಸ್ಥಿತಿ ಕಾಪಾಡಲು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News