ಉಡುಪಿ: ಸಾರ್ವಜನಿಕ ಸಮಾಲೋಚನಾ ಸಭೆ
Update: 2021-02-17 21:16 IST
ಉಡುಪಿ, ಫೆ.17: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಹೊಸದಾಗಿ ಕರ್ನಾಟಕ ನಗರ ಮೂಲ ಸೌಕರ್ಯದ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಬೆಂಗಳೂರು ಕ್ವಿಮಿಪ್ ಟ್ರಾಂಚ್-2 ಅಡಿಯಲ್ಲಿ ಉಡುಪಿ ನಗರದಲ್ಲಿ ಕೈಗೊಳ್ಳುವ 24x7 ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಕಾಮಗಾರಿಗಳ ಬಗ್ಗೆ ಇಂದ್ರಾಳಿ ವಾರ್ಡ್‌ನ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಕೆಯುಐಡಿಎಫ್‌ಸಿ ಹಾಗೂ ಉಡುಪಿ ನಗರಸಭೆಯ ಸಹಯೋಗದೊಂದಿಗೆ, ಫೆ.20ರಂದು ಸಂಜೆ 4 ಗಂಟೆಗೆ ಇಂದ್ರಾಳಿಯ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.